- Advertisement -
- Advertisement -
ವಿಟ್ಲ: ವಿಟ್ಲ ಕಸಬಾ ಗ್ರಾಮದ ಒಕ್ಕೆತ್ತೂರು ಕೊರೊನಾ ಸೋಂಕಿತ ಯುವಕ ಕುಟುಂಬದಲ್ಲಿ ಮತ್ತೆ ಮೂವರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಇದೀಗ ಒಂದೇ ಕುಟುಂಬದಲ್ಲಿ ಒಟ್ಟು 7 ಪ್ರಕರಣ ಪತ್ತೆಯಾಗಿದೆ.

ಒಕ್ಕೆತ್ತೂರು 31 ವರ್ಷದ ಯುವಕನಲ್ಲಿ ಪಾಸಿಟಿವ್ ಪತ್ತೆಯಾಗಿತ್ತು. ಬಳಿಕ ಅವರ ಮನೆಯನ್ನು ಸೀಲ್ ಡೌನ್ ಮಾಡಲಾಗಿತ್ತು. ಕುಟುಂಬದ ಸದಸ್ಯರೆಲ್ಲರ ಕೋವಿಡ್ ಪರೀಕ್ಷೆ ನಡೆಸಲಾಗಿತ್ತು. ಬಳಿಕ ಯುವಕನ ಸಹೋದರನಿಗೆ, ಪತ್ನಿ, ಹಾಗೂ ಮತ್ತೊಬ್ಬರು ಮಹಿಳೆ ಸೇರಿದಂತೆ ನಾಲ್ಕು ಮಂದಿಯಲ್ಲಿ ಪಾಸಿಟಿವ್ ಪತ್ತೆಯಾಗಿತ್ತು.

ಇದೀಗ ಕುಟುಂಬದ ಮತ್ತೆ ಮೂವರ ವರದಿ ಬಂದಿದ್ದು, ಮೊದಲು ಸೋಂಕಿತ ಯುವಕನ ತಂದೆ, ಸಹೋದರಿ ಹಾಗೂ ಅತ್ತಿಗೆಗೂ ಸೋಂಕು ಇರೋದು ದೃಢಪಟ್ಟಿದೆ. ಒಂದೇ ಕುಟುಂಬದ ಒಟ್ಟು ಏಳು ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ.
- Advertisement -