- Advertisement -
- Advertisement -



ಕೋಟ: ಅಕಸ್ಮಿಕವಾಗಿ ಬಾವಿಗೆ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ನೆಂಚಾರು ಎಂಬಲ್ಲಿ ನಡೆದಿದೆ.
ಮೃತಪಟ್ಟ ವ್ಯಕ್ತಿ ನೆಂಚಾರು ಗ್ರಾಮದ ಸರ್ವೋತ್ತಮ (73) ಎಂದು ಗುರುತಿಸಲಾಗಿದೆ.
ಇವರು ತುಳಸಿಗೆ ನೀರು ಹಾಕಲು ಮನೆಯ ಎದುರಿನ ಬಾವಿಯಿಂದ ನೀರನ್ನು ಎಳೆಯುತ್ತಿರುವಾಗ ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದರೆನ್ನಲಾಗಿದೆ. ಇದರಿಂದ ನೀರಿನಲ್ಲಿ ಮುಳುಗಿದ ಅವರು ಮೃತಪಟ್ಟರು ಎಂದು ತಿಳಿದುಬಂದಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -