Sunday, June 29, 2025
spot_imgspot_img
spot_imgspot_img

ಕೋಟ: ಕುಡಿದ ಮತ್ತಿನಲ್ಲಿ ತನ್ನ ಮನೆಗೆ ಬೆಂಕಿ ಹಚ್ಚಿದ ಮಾಲಕ ; ಲಕ್ಷಾಂತರ ರೂ. ಮೌಲ್ಯದ ಸೊತ್ತುಗಳು ಹಾನಿ..!

- Advertisement -
- Advertisement -

ಕೋಟ: ವ್ಯಕ್ತಿಯೋರ್ವ ಕುಡಿದು ಬಂದು ಪತ್ನಿಗೆ ಹೊಡೆದು ಮನೆಗೆ ಬೆಂಕಿ ಹಚ್ಚಿದ ಪರಿಣಾಮ ಲಕ್ಷಾಂತರ ರೂ. ಮೌಲ್ಯದ ಸೊತ್ತುಗಳಿಗೆ ಹಾನಿಯಾಗಿರುವ ಘಟನೆ ಕೋಟ ಎಂಬಲ್ಲಿ ನಡೆದಿದೆ.

ಕುಡಿದ ಮತ್ತಿನಲಲ್ಲಿ ಮನೆಗೆ ಬೆಂಕಿ ಹಚ್ಚಿದ ವ್ಯಕ್ತಿ ಯಡಾಡಿ ಮತ್ಯಾಡಿ ಗ್ರಾಮದ ಕ್ಯಾಸನಮಕ್ಕಿ ಶುಭಲತಾ ಎಂಬವರ ಪತಿ ದಿನೇಶ ಎಂದು ಗುರುತಿಸಲಾಗಿದೆ.

ದಿನೇಶ ಎಂಬಾತ ಮೇ 8ರಂದು ರಾತ್ರಿ ವಿಪರೀತ ಕುಡಿದು ಮನೆಗೆ ಬಂದು ವಿನಾಃಕಾರಣ ಪತ್ನಿಗೆ ಅವಾಚ್ಯ ಶಬ್ದದಿಂದ ಬೈದು ಕೈಯಿಂದ ಹೊಡೆದಿದ್ದನು. ಈ ಕಾರಣ ಶುಭಲತಾ ತನ್ನ ಮನೆ ಅಂಪಾರಿಗೆ ಹೋಗಿದ್ದರು. ಮರುದಿನ ಬೆಳಗ್ಗೆ ವಾಪಾಸ್ಸು ಮನೆಗೆ ಬಂದು ನೋಡುವಾಗ ದಿನೇಶನು ದ್ವೇಷದಿಂದ ಮನೆಗೆ ಬೆಂಕಿ ಹಚ್ಚಿರುವುದು ಕಂಡುಬಂದಿದೆ.

ಇದರಿಂದ ಮನೆಯ ಹಿಂದಿನ ಭಾಗ ಬೆಂಕಿ ತಗುಲಿ ಮರದ ಉಪಕರಣ ಹಾಗೂ ಅಡುಗೆ ಮಾಡುವ ಸಾಮಗ್ರಿಗಳು ಮತ್ತು ಬಟ್ಟೆಗಳು, ಅಡುಗೆ ಆಹಾರ ಪದಾರ್ಥಗಳು ಬೆಂಕಿಯಲ್ಲಿ ಸುಟ್ಟು ಹೋಗಿದೆ. ಇದರಿಂದ ಒಟ್ಟು 3 ಲಕ್ಷ ರೂ. ಮೌಲ್ಯದ ಸೊತ್ತುಗಳು ನಷ್ಟವಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!