Saturday, July 5, 2025
spot_imgspot_img
spot_imgspot_img

ಕೋಟೆಕಾರು ಬ್ಯಾಂಕ್ ದರೋಡೆ ಪ್ರಕರಣ; ಸ್ವಾಧೀನಪಡಿಸಿಕೊಂಡ ಕೋಟ್ಯಂತರ ರೂ. ಮೌಲ್ಯದ ಚಿನ್ನಾಭರಣ ಮತ್ತು ನಗದು ಬಿಡುಗಡೆಗೆ

- Advertisement -
- Advertisement -

ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಸಂಘ (ನಿ) ಸೊಸೈಟಿ ಶಾಖೆಯಲ್ಲಿ ನಡೆದ ದರೋಡೆ ಪ್ರಕರಣದಲ್ಲಿ ಆರೋಪಿಗಳಿಂದ ವಶಪಡಿಸಿಕೊಳ್ಳಲಾಗಿದ್ದ 18 ಕೆ.ಜಿ 360.302 ಗ್ರಾಂ ಚಿನ್ನಾಭರಣ ಮತ್ತು ನಗದು (ಮೌಲ್ಯ ರೂ 13 ಕೋಟಿ 50 ಲಕ್ಷ) ಗಳನ್ನು ಬ್ಯಾಂಕ್‌ಗೆ ನೀಡುವಂತೆ ನ್ಯಾಯಾಲಯವು ಆದೇಶಿಸಿದೆ.

ದಿನಾಂಕ: 17-01-2025 ರಂದು ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಸಂಘ (ನಿ) ಸೊಸೈಟಿ ಶಾಖೆಯಲ್ಲಿ ಡಕಾಯಿತಿ ಕೃತ್ಯ ನಡೆದ ಬಗ್ಗೆ ಸೊಸೈಟಿಯ ಮ್ಯಾನೇಜರ್ ಶ್ರೀಮತಿ ವಾಣಿ ಎಲ್ ರವರು ನೀಡಿದ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಮೋ, ನಂಬ್ರ : 07/2025 ಕಲಂ: 126(2),127(7).309(2),309(4), 310(2).351(2),324(1), ಜೊತೆಗೆ 3(5) ಬಿ.ಎನ್‌‌.ಎಸ್‌-2023 ಮತ್ತು ಕಲಂ3(1),4.25 (1B)(b),27 Indian Arms Act 1959 ಪ್ರಕರಣ ದಾಖಲಾಗಿ ಆರೋಪಿಗಳಾದ ತಮಿಳುನಾಡು ರಾಜ್ಯದ ವಾಸಿಗಳಾದ ಮುರುಗಂಡಿ ತೇವರ್ @ ಕುಮಾರ್.. ಯೋಸ್ವಾ ರಾಜೇಂದ್ರನ್ @ ಜೋಶ್ವ ರಾಜೇಂದ್ರನ್ @ ಜೇಶ್ವ ರಾಜೇಂದ್ರನ್, ಕಣ್ಣನ್ ಮಣಿ. ಎಂ.ಷಣ್ಣುಗಸುಂದರಂ. ಹಾಗೂ ಸ್ಥಳಿಯ ನಿವಾಸಿಗಳಾದ ಶಶಿ ತೇವರ್ @ ಭಾಸ್ಕರ ಬೆಳ್ಚಪಾಡ ಮತ್ತು ಕೆ.ಮೊಹಮ್ಮದ್ ನಝೀರ್ @ ನಝೀರ್ ಎಂಬವರುಗಳನ್ನು ದಸ್ತಗಿರಿ ಮಾಡಿ ದರೋಡೆಯಾದ 18 ಕೆ.ಜಿ 360.302 ಗ್ರಾಂ ಚಿನ್ನಾಭರಣ ಮತ್ತು ನಗದನ್ನು (ಮೌಲ್ಯ ರೂ 13 ಕೋಟಿ 50 ಲಕ್ಷ) ಸ್ವಾಧೀನಪಡಿಸಿ ಪ್ರಕರಣದಲ್ಲಿ ತನಿಖೆ ಪೂರೈಸಿ ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಲಾಗಿತ್ತು.

ಈ ಪ್ರಕರಣದಲ್ಲಿ ಸ್ವಾಧೀನಪಡಿಸಿಕೊಂಡ 18 ಕೆ.ಜಿ 360.302 ಗ್ರಾಂ ಚಿನ್ನಾಭರಣ ಮತ್ತು ನಗದು (ಮೌಲ್ಯ ರೂ 13 ಕೋಟಿ 50 ಲಕ್ಷ) ಗಳನ್ನು ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಸಂಘ (ನಿ) ಸೊಸೈಟಿ ಕೆ.ಸಿ ರೋಡ್ ಶಾಖೆಯ ಮ್ಯಾನೇಜರ್ ಹಾಗೂ ಶ್ರೀಮತಿ ವಾಣಿ ರವರಿಗೆ ಬಿಡುಗಡೆಗೊಳಿಸುವಂತೆ ನ್ಯಾಯಾಲಯವು ಡಿಸ್ ಸಂಖ್ಯೆ 499/2025 ದಿನಾಂಕ:03-07-2025 ರ ಆದೇಶಿಸಿದೆ. ಆದೇಶಿಸಿದಂತೆ ಎಲ್ಲಾ ಚಿನ್ನಾಭರಣಗಳನ್ನು ಹಾಗೂ ನಗದು ಹಣವನ್ನು ಕೋಟೆಕಾರ್ ವ್ಯವಸಾಯ ಸೇವಾ ಸಹಕಾರಿ ಸಂಘ (ನಿ) ಕೆ.ಸಿ ರೋಡ್ ಶಾಖೆಯ ಮ್ಯಾನೇಜರ್ ಹಾಗೂ ಜಿ.ಪಿ.ಎದಾರರಾದ ಶ್ರೀಮತಿ ವಾಣಿ ಆಳ್ವ ರವರಿಗೆ ದಿನಾಂಕ: 05-07-2025 ರಂದು ವೀಡಿಯೋಗ್ರಾಫಿ ಮತ್ತು ಫೋಟೋಗ್ರಾಫಿ ಮಾಡಿ ಆಪ್ರೈಝರ್‌ ರವರಿಂದ ಪರಿಶೀಲನೆಗೊಳಪಡಿಸಿ ತೂಕ ಮಾಡಿ ಪಂಚಾಯತುದಾರರಾದ ದಿವ್ಯರಾಜ್ ಮತ್ತು ವಿಕಾಸ್‌ರವರ ಸಮಕ್ಷಮದಲ್ಲಿ ಮಹಜರು ಮುಖೇನ ಬಿಡುಗಡೆಗೊಳಿಸಲಾಗಿದೆ.

- Advertisement -

Related news

error: Content is protected !!