Sunday, June 14, 2026
spot_imgspot_img
spot_imgspot_img

ಕೊಯಿಲ ಸಂಗಬೆಟ್ಟು ರಸ್ತೆ ಕಾಮಗಾರಿ ವಿಳಂಬಕ್ಕೆ ರಮನಾಥ ರೈ ಅಸಮಾಧಾನ

- Advertisement -
- Advertisement -

ಬಂಟ್ವಾಳ:ಬಂಟ್ವಾಳ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಕೊಯಿಲ- ಸಂಗಬೆಟ್ಟು ರಾಜ್ಯ ಹೆದ್ದಾರಿ ಕಾಮಗಾರಿ ವಿಳಂಬಕ್ಕೆ ಮಾಜಿ ಸಚಿಬ ಬಿ.ರಮನಾಥ ರೈ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು,ಈ ಬಗ್ಗೆ ತುರ್ತು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಲೋಕೋಪಯೋಗಿ ಇಲಾಖೆಯ ಮುಖ್ಯ ಇಂಜಿನಿಯರ್ ಕಾಂತರಾಜ್ ಅವರಿಗೆ ಲಿಖಿತ ಪತ್ರ ಬರೆದು ಆಗ್ರಹಿಸಿದ್ದಾರೆ.


ಸುಮಾರು ನಾಲ್ಕೂವರೆ ಕಿ.ಮೀ ಉದ್ದದ ಈ ರಸ್ತೆಗೆ ಸ್ಟೇಟ್ ಹೈವೇ ಡೆವಲಪ್ಮೆಂಟ್ ಪ್ರೊಜೆಕ್ಟ್ (ಎಸ್ ಎಚ್ ಡಿ.ಪಿ) ಯೋಜನೆಯಡಿ 2 ವರ್ಷಗಳ ಹಿಂದೆ 12 ಕೋಟಿ ರೂಪಾಯಿ ಮಂಜೂರಾತಿಯಾಗಿದೆ.ಸದ್ರಿ ಕಾಮಗಾರಿಯ ಟೆಂಡರ್ ಅನುಮತಿಯಾಗಿ 1 ವರ್ಷ ಕಳೆದಿದೆ .ಭಟ್ಕಳ ಇಬ್ರಾಹಿಂ ಎಂಬವರು ಸದ್ರಿ ಕಾಮಗಾರಿಯ ಗುತ್ತಿಗೆ ವಹಿಸಿಕೊಂಡಿದ್ದಾರೆ.ಆದರೂ ಇದುವರೆಗೂ ಈ ರಸ್ತೆಯ ಕಾಮಗಾರಿ ಆರಂಭಗೊಂಡಿಲ್ಲ.ತಕ್ಷಣದಿಂದ ರಸ್ತೆ ಕಾಮಗಾರಿಗೆ ಚಾಲನೆ ನೀಡುವಂತೆ ರಮಾನಾಥ ರೈ ಬರೆದ ಪತ್ರದಲ್ಲಿ ಇಂಜಿನಿಯರ್ ಅವರಿಗೆ ಆಗ್ರಹಿಸಿದ್ದಾರೆ.

- Advertisement -

Related news

error: Content is protected !!