- Advertisement -
- Advertisement -
ತಿರುವನಂತಪುರಂ: ಕೇರಳದ ಕೋಯಿಕ್ಕೋಡ್ ನಲ್ಲಿ ನಡೆದ ವಿಮಾನ ದುರಂತ ಪ್ರಕರಣಕ್ಕೆ ಸಂಬಂಧಿಸಿ ಏರ್ ಇಂಡಿಯಾ ವಿಮಾನದ ಬ್ಲ್ಯಾಕ್ ಬಾಕ್ಸ್ ಗಳು ಪತ್ತೆಯಾಗಿವೆ. ದೆಹಲಿಯಿಂದ ಕೇರಳಕ್ಕೆ ಆಗಮಿಸಿದ ತನಿಖಾ ತಂಡ, ಡಿಜಿಟಲ್ ಫ್ಲೈಟ್ ಡೇಟಾ ರೆಕಾರ್ಡರ್ ಅನ್ನು ವಶಕ್ಕೆ ಪಡೆದಿದ್ದಾರೆ. ಇದರಿಂದ ವಿಮಾನದ ಸಂಪೂರ್ಣ ಮಾಹಿತಿ ಲಭಿಸಲಿದೆ ಎಂದು ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್ (ಡಿಜಿಸಿಎ) ತಿಳಿಸಿದೆ.
ವಿಮಾನದ ಪ್ಲೋರ್ ಬೋರ್ಡ್ ಕಟ್ ಮಾಡಿ, ವಾಯ್ಸ್ ರೆಕಾರ್ಡರ್ ಅನ್ನು ಕೂಡ ತೆಗೆಯಲಾಗಿದೆ. ಇದರಿಂದ ವಿಮಾನವಿದ್ದ ಎತ್ತರ, ವೇಗ, ಪೈಲಟ್ ಗಳ ನಡುವಿನ ಸಂಭಾಷಣೆ ಹಾಗೂ ಅಪಘಾತ ಸಮಯದಲ್ಲಿ ಏನಾಗಿತ್ತು ಎಂಬುದು ತಿಳಿಯಲಿದೆ.
ವಂದೇ ಮಾತರಂ ಯೋಜನೆ ಮೂಲಕ 190 ಪ್ರಯಾಣಿಕರನ್ನು ಹೊತ್ತ ಏರ್ ಇಂಡಿಯಾ ವಿಮಾನ ಕೋಯಿಕ್ಕೋಡ್ ನಿಲ್ದಾಣದ ರನ್ ವೇ ತಲುಪುತ್ತಿದ್ದಂತೆ ಜಾರಿ 30 ಅಡಿ ಆಳದ ಕಣಿವೆಗೆ ಬಿದ್ದಿತ್ತು. ಇದರಿಂದ ಸುಮಾರು 18 ಮಂದಿ ಸಾವನ್ನಪ್ಪಿದ್ದಾರೆ. ಹಲವರ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
- Advertisement -