- Advertisement -
- Advertisement -
ಮಂಗಳೂರು: ಸುಮಾರು 40 ವರ್ಷಗಳಿಂದ ಕೆಎಸ್ಆರ್ ಟಿಸಿ ಯಲ್ಲಿ ಚಾಲಕರಾಗಿ ಕರ್ತವ್ಯ ಸಲ್ಲಿಸಿ, ಇದೀಗ ವೃತ್ತಿಯಿಂದ ನಿವೃತ್ತಿ ಹೊಂದಿರುವ ವಿಜಯ ಶೆಟ್ಟಿ ಕಡಂಬು ವಿಟ್ಲ ಇವರಿಗೆ ಬೀಳ್ಕೊಡುಗೆ ಸಮಾರಂಭ ಮಂಗಳೂರಿನ ಕೆ ಎಸ್ ಆರ್ ಟಿ ಸಿ ಒಂದನೇ ಘಟಕದಲ್ಲಿ ನಡೆಯಿತು.
ಸುಮಾರು ನಲವತ್ತು ವರ್ಷಗಳಿಂದ ಕೆ ಎಸ್ ಆರ್ ಟಿ ಸಿ ಯಲ್ಲಿ ಬಸ್ ಚಾಲಕರಾಗಿ ಕರ್ತವ್ಯ ನಿರ್ವಹಿಸಿದ ವಿಜಯ ಶೆಟ್ಟಿಯವರು ಪ್ರಾಮಾಣಿಕ, ನಿಷ್ಠಾವಂತ ಚಾಲಕರಾಗಿ ಎಲ್ಲರ ಮೆಚ್ಚುಗೆ ಪ್ರೀತಿಗೆ ಪಾತ್ರರಾದವರು.
ಬೀಳ್ಕೊಡುಗೆ ಸಮಾರಂಭದಲ್ಲಿ ರಾಜೇಶ್ ಶೆಟ್ಟಿ ವಿಭಾಗೀಯ ನಿಯಂತ್ರಣಾಧಿಕಾರಿ, ಡಿ ಟಿ ಓ ಕಮಲ್ ಕುಮಾರ್, ಡಿಪೋ ಮ್ಯಾನೇಜರ್ ಶಿವರಾಮ್, ನಿವೃತ್ತ ಹಿರಿಯ ಅಧಿಕಾರಿ ನಾಗರಾಜ ಶಿರಾಲಿ, ಸೇರಿದಂತೆ ಕೆ ಎಸ್ ಆರ್ ಟಿ ಸಿ ಅಧಿಕಾರಿಗಳು ಉಪಸ್ಥಿತರಿದ್ದರು.
- Advertisement -