Saturday, January 25, 2025
spot_imgspot_img
spot_imgspot_img

ಕುದ್ದುಪದವು ದಿನಸಿ ಅಂಗಡಿಯಿಂದ ಗಿರಾಕಿಯ ವೇಷದಲ್ಲಿ ಬಂದು ಹಣ ಕಳವು.!

- Advertisement -
- Advertisement -

ಬಂಟ್ವಾಳ: ಗಿರಾಕಿಯ ವೇಷದಲ್ಲಿ ಅಂಗಡಿ ಮಾಲಕನ ಗಮನ ಬೇರೆ ಕಡೆಗೆ ಸೆಳೆದು ದಿನಸಿ ಅಂಗಡಿಯಿಂದ ಕಳವು ಘಟನೆ ವಿಟ್ಲ ಪೋಲೀಸ್ ಠಾಣಾ ವ್ಯಾಪ್ತಿಯ ಕುದ್ದುಪದವು ಎಂಬಲ್ಲಿ ಶನಿವಾರ ಮಧ್ಯಾಹ್ನ ವೇಳೆ ನಡೆದಿದೆ.

ಕೇಪು ಗ್ರಾಮದ ಕುದ್ದುಪದವು ಎಂಬಲ್ಲಿನ ಶ್ರೀಧರ್ ರೈ ಎಂಬವರ ದಿನಸಿ ಅಂಗಡಿಯಿಂದ ಸುಮಾರು 33 ಸಾವಿರ ರೂ ಹಣ ವನ್ನು ಕಳ್ಳ ದೋಚಿಕೊಂಡು ಹೋಗಿದ್ದಾನೆ. ಪಶು ಆಹಾರವನ್ನು ಕೇಳಿ ನಗದು 2 ಸಾವಿರ ರೂ ಹಣವನ್ನು ನೀಡಿದಾಗ ಚಿಲ್ಲರೆ ಗಾಗಿ ಅಲ್ಲೇ ಅಂಗಡಿ ಹಿಂಭಾಗದಲ್ಲಿ ರುವ ಮನೆಗೆ ಶ್ರೀಧರ್ ರೈ ಹೋದಾಗ ಅವರ ಪತ್ನಿಯಲ್ಲಿ ಆತ ನೀರು ಕೇಳಿ ಕುಡಿದಿದ್ದ, ಬಳಿಕ ಚಿಲ್ಲರೆ ಶ್ರೀಧರ್ ರೈ ಚಿಲ್ಲರೆ ನೀಡಿದಾಗ ಆತ ಚಿಲ್ಲರೆ ಪಡೆದು ಕೊಂಡು ಪಶು ಆಹಾರ ವನ್ನು ಮತ್ತೆ ಕೊಂಡು ಹೋಗುತ್ತೇನೆ ಎಂದು ಹೇಳಿ ಹೋಗಿದ್ದ.

ಆತ ತೆರಳಿದ ಬಳಿಕ ಡ್ರಾ ವರ್ ತೆಗೆದು ನೋಡಿದಾಗ ಅದರಲ್ಲಿ ಇದ್ದ 3000 ಸಾವಿರ ಹಣ ಹಾಗೂ ಮನೆಯ ಕಪಾಟಿನಲ್ಲಿದ್ದ 30 ಸಾವಿರ ರೂ ಕೂಡ ಆತ ಕಳವು ಮಾಡಿಕೊಂಡು ಹೋಗಿದ್ದಾನೆ ಎಂದು ವಿಟ್ಲ ಪೋಲೀಸ್ ಠಾಣೆಯಲ್ಲಿ ನೀಡಿದ  ದೂರಿನಲ್ಲಿ ತಿಳಿಸಲಾಗಿದೆ.

- Advertisement -

Related news

error: Content is protected !!