Friday, October 30, 2026
spot_imgspot_img
spot_imgspot_img

ಕುಡ್ತಮುಗೇರು: ಕೆಂಪು ಕಲ್ಲು ಸಾಗಾಟದ ಲಾರಿ ಪಲ್ಟಿ; ಚಾಲಕ, ಸಿಬ್ಬಂದಿಗಳು ಅಪಾಯದಿಂದ ಪಾರು

- Advertisement -
- Advertisement -

ಕುಡ್ತಮುಗೇರು: ಕೆಂಪು ಕಲ್ಲು ಸಾಗಾಟದ ಲಾರಿ ಪಲ್ಟಿಯಾದ ಘಟನೆ ವಿಟ್ಲ ಠಾಣಾ ವ್ಯಾಪ್ತಿಯ ಕುಡ್ತಮುಗೇರು-ಸೆರ್ಕಳ ರಸ್ತೆಯ ಕಲ್ಲಮಜಲು ಎಂಬಲ್ಲಿ ನಡೆದಿದೆ.

ಕುಡ್ತಮುಗೇರು ಮೂಲಕ ಸೆರ್ಕಳ ಎಂಬಲ್ಲಿಗೆ ಕೆಂಪು ಕಲ್ಲು ಸಾಗಿಸುತ್ತಿದ್ದ ಈಚರ್ ಲಾರಿ ಕಲ್ಲಮಜಲು ಅಪಾಯಕಾರಿ ರಸ್ತೆ ತಿರುವಿನಲ್ಲಿ ಮುಂಭಾಗದಿಂದ ಬರುತ್ತಿದ್ದ ಕಾರಿಗೆ ಸೈಡ್ ಕೊಡುವ ವೇಳೆ ಮೋರಿ ಕುಸಿದು ಕೆಳಭಾಗದ ತೋಟಕ್ಕೆ ಪಲ್ಟಿ ಹೊಡೆದಿದೆ. ಅಪಘಾತದ ಪರಿಣಾಮ ಲಾರಿಯೊಳಗಿದ್ದ ಚಾಲಕ, ಇಬ್ಬರು ಕಾರ್ಮಿಕರು ಯಾವುದೇ ಗಾಯಗಳಿಲ್ಲದೇ ಅದೃಷ್ಟವಶಾತ್ ಪಾರಾಗಿದ್ದಾರೆ.

- Advertisement -

Related news

error: Content is protected !!