Tuesday, July 1, 2025
spot_imgspot_img
spot_imgspot_img

ಕುಕ್ಕಬೆಟ್ಟು: ನವಜನ್ಯ ಮಿತ್ರವೃಂದ(ರಿ.) ಕುಕ್ಕಬೆಟ್ಟು ಇದರ ಆಶ್ರಯದಲ್ಲಿ 510ಕೆ.ಜಿ ವಿಭಾಗದ ಪುರುಷರ ಮತ್ತು ಮಹಿಳೆಯರ ಓಪನ್ ಮಾದರಿಯ ಮುಕ್ತ ಹಗ್ಗಜಗ್ಗಾಟ

- Advertisement -
- Advertisement -

ಕುಕ್ಕಬೆಟ್ಟು: ನವಜನ್ಯ ಮಿತ್ರವೃಂದ(ರಿ.) ಕುಕ್ಕಬೆಟ್ಟು ಇದರ ಆಶ್ರಯದಲ್ಲಿ 510ಕೆ.ಜಿ ವಿಭಾಗದ ಪುರುಷರ ಮತ್ತು ಮಹಿಳೆಯರ ಓಪನ್ ಮಾದರಿಯ ಮುಕ್ತ ಹಗ್ಗಜಗ್ಗಾಟ ಫೆ.11ನೇ ಆದಿತ್ಯವಾರ ಸಂಜೆ 7:00ಕ್ಕೆ ಕುಕ್ಕೆಬೆಟ್ಟು ಕ್ರೀಡಾಂಗಣದಲ್ಲಿ ನಡೆಯಲಿದೆ.

ಕಾರ್ಯಕ್ರಮದ ಉದ್ಘಾಟನೆಯನ್ನು ಕೇಪು ಗ್ರಾಮ ಪಂಚಾಯತ್ ಸದಸ್ಯ ಜಗಜೀವನ್ ರಾಮ್ ಶೆಟ್ಟಿ ಇವರು ಉದ್ಘಾಟಿಸಲಿದ್ದಾರೆ. ನವಜನ್ಯ ಮಿತ್ರವೃಂದ(ರಿ.) ಕುಕ್ಕಬೆಟ್ಟು ಅಧ್ಯಕ್ಷ ಸತೀಶ್ ಸುವರ್ಣ ಕುಕ್ಕೆಬೆಟ್ಟು ಅಧ್ಯಕ್ಷತೆ ವಹಿಸಲಿದ್ದಾರೆ. ಕೇಪು ಗ್ರಾಮ ಪಂಚಾಯತ್ ಸದಸ್ಯೆ ಮೋಹಿನಿ ಕುಕ್ಕೆಬೆಟ್ಟು , ಕೇಪು ಗ್ರಾಮ ಪಂಚಾಯತ್ ಸದಸ್ಯೆ ವಿಶಾಲಾಕ್ಷಿ ಅತಿಕ್ರಾಯ ಬೈಲು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ರಾತ್ರಿ 7:00ಕ್ಕೆ ನಡೆಯುವ ಹಗ್ಗಜಗ್ಗಾಟದ ಉದ್ಘಾಟನಾ ಕಾರ್ಯಕ್ರಮ ಮೋರ್ಚಾ ಜಿಲ್ಲಾ ಬಿಜೆಪಿ ರೈತ ಮಾಜಿ ಅಧ್ಯಕ್ಷ ರಾಜೀವ ಭಂಡಾರಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಕೇಪು ಗ್ರಾಮ ಪಂಚಾಯತ್ ಅಧ್ಯಕ್ಷ ರಾಘವ ಮಣಿಯಾಣಿ ಸಾರಡ್ಕ ಅಧ್ಯಕ್ಷತೆ ವಹಿಸಲಿದ್ದಾರೆ. ಕೇಪು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಬಾಲಚಂದ್ರ ನಾಯಕ್ ಕಟ್ಟೆ, ವರಪ್ಪಾದೆ ಸೌಪರ್ಣಿಕ ಕ್ರಶರ್‍ ಮನೋಜ್ ಪಿ, ಕೇಪು ಗ್ರಾಮ ಪಂಚಾಯತ್ ಸದಸ್ಯ ಪುರುಷೋತ್ತಮ ಗೌಡ ಕಲ್ಲಂಗಳ, ವರಪ್ಪಾದೆ ರೋಡ್‌ಲೈನ್ ರಮೇಶ್ ದುರ್ಗಾಂಬಾ, ಪ್ರಗತಿಪರ ಜೇನು ಕೃಷಿಕ ರಾಜ್ಯ ಪ್ರಶಸ್ತಿ ವಿಜೇತ ಸುಧಾಕರ ಪೂಜಾರಿ ಬಡೆಕೋಡಿ, ಕೇಪು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ದೇವದಾಸ್ ಎಂ. ಅಡ್ಯನಡ್ಕ, ಕುಕ್ಕಡಬೆಟ್ಟು ಜಿನಚಂದ್ರ ಜೈನ್, ವಿಟ್ಲ ವಲಯ ಬಂಟರ ಸಂಘ ಅಧ್ಯಕ್ಷ ರಾಧಾಕೃಷ್ಣ ಶೆಟ್ಟಿ ಚೆಲ್ಲಡ್ಕ, ಕುಕ್ಕೆಬೆಟ್ಟು ಟಿ.ಕೆ. ಎಂಟರ್‌ಪ್ರೈಸಸ್ ಮುನೀರ್‍ ದರ್ಬೆ, ವರಪ್ಪಾದೆ ಎಫ್.ಜೆ.ಜೆ. ಎಂಟರ್‌ಪ್ರೈಸಸ್ ಇಸ್ಮಾಯಿಲ್, ವರಪ್ಪಾದೆ ಮೂಕಾಂಬಿಕಾ ಎಂಟರ್‌ಪ್ರೈಸಸ್ ಸುರೇರ್ಶ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಕುಕ್ಕೆಬೆಟ್ಟು ದೈವ ನರ್ತಕರು ನಾರಾಯಣ ಅಜಿಲ, ದೈವ ನರ್ತಕರು ಕಾಂತು ಅಜಿಲ ಸನ್ಮಾನ ಸ್ವೀಕರಿಸಲಿದ್ದಾರೆ.

- Advertisement -

Related news

error: Content is protected !!