Friday, May 17, 2024
spot_imgspot_img
spot_imgspot_img

ವಾಹನ ಚಾಲನೆಗೆ ಮಾತ್ರವಲ್ಲ ನಡೆದಾಡಲೂ ಕೂಡಾ ಅಸಾಧ್ಯವಾಗುವಷ್ಟು ಹದಗೆಟ್ಟ ಕುಕ್ಕರೆಬೆಟ್ಟು ಪಾಟ್ರಕೊಡಿ ರಸ್ತೆ; ಗ್ರಾಮಸ್ಥರಿಂದ ಉಗ್ರ ಹೋರಾಟ ನಡೆಸಲು ತೀರ್ಮಾನ

- Advertisement -G L Acharya panikkar
- Advertisement -

ಕೆದಿಲ ಗ್ರಾಮ ಪಂಚಾಯತ್ ಹಾಗು ನೆಟ್ಲ ಮುಡ್ನೂರು ಗ್ರಾಮ ಪಂಚಾಯತ್ ಒಳಪಟ್ಟ ಕುಕ್ಕರೆಬೆಟ್ಟು ಪಾಟ್ರಕೊಡಿಯ ರಸ್ತೆ ಹದಗೆಟ್ಟಿದ್ದು, ವಾಹನ ಚಾಲನೆಗೆ ಮಾತ್ರವಲ್ಲ ನಡೆದಾಡಲು ಕೂಡಾ ಅಸಾಧ್ಯವಾಗಿದೆ.

ಈ ರಸ್ತೆಯ ಡಾಮರೀಕನ 1996 ರಲ್ಲಿ ಅಗಿದು, ಅಂದರೆ 25 ವರ್ಷಗಳಾಯಿತು, 10 ವರ್ಷಕ್ಕಿಂತ ಮುಂಚೆ ಒಂದು ‌ಬಾರಿ ಗುಂಡಿ ಮುಚ್ಚುವ ಕೆಲಸ ಬಿಟ್ಟರೆ ಇನ್ನು ಯಾವುದೇ ಕಾಮಗಾರಿ ಈ ರಸ್ತೆಯಲ್ಲಿ ನಡೆದಿಲ್ಲ, ಪಾಟ್ರಕೊಡಿಯ ನಾಗರಿಕರು ಹಲವಾರು ಬಾರಿ ಶಾಸಕರಲ್ಲಿ, ಸಂಬಂಧಪಟ್ಟವರಲ್ಲಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಲಿಲ್ಲ.

ಹೆಚ್ಚು ಕಡಿಮೆ 300 ರಷ್ಟು ಮನೆಗಳಿರುವ ಪಾಟ್ರಕೊಡಿ, ಕಲ್ಲಸರ್ಪೆ, ಕುದ್ದುಂಬಾಡಿ ಕರಿಮಜಲು ಗ್ರಾಮ ವಾಸಿಗಳಿಗೆ ಇದೆ ಮುಖ್ಯ ರಸ್ತೆ, ಈ ರಸ್ತೆಯ ಮೂಲಕ ಮಂಗಳೂರು ಪುತ್ತೂರು ರಸ್ತೆಯ ಮುರ, ಪುತ್ತೂರು ಉಪ್ಪಿನಂಗಡಿ ರಸ್ತೆಯ ಪಡೀಲ್, ಸೇಡಿಯಾಪು, ಬೆಂಗಳೂರು-ಮಂಗಳೂರು ರಾಷ್ಟ್ರೀಯ ರಸ್ತೆಯ ಗಡಿಯಾರ ಪೇರಮುಗೇರು ಸೇರಬಹುದಾಗಿದೆ. ಈ ರಸ್ತೆಯ ಕಾಮಗಾರಿಯ ಬಗ್ಗೆ ಸಂಬಂಧಪಟ್ಟವರು ಗಮನ ಹರಿಸದಿದ್ದಲ್ಲಿ ಗ್ರಾಮದ ನಾಗರಿಕರು ಉಗ್ರ ಹೋರಾಟ ನಡೆಸಲು ತೀರ್ಮಾನಿಸಿದ್ದಾರೆ ಎಂದು ತಿಳಿಸಿದ್ದಾರೆ.

- Advertisement -

Related news

error: Content is protected !!