Monday, February 10, 2025
spot_imgspot_img
spot_imgspot_img

ಕುಂಡಡ್ಕ: ಆಟೋ ಚಾಲಕರ ಪಾಲಿಗೆ ಬಿಸಿಲು, ದಣಿವಿಗೆ ಆಶ್ರಯವಾಗಿದ್ದ ಮರದ ಕಟ್ಟೆ ಮತ್ತು ಮರವನ್ನು ತೆರವುಗೊಳಿಸಲು ಮುಂದಾದ ಗ್ರಾ.ಪಂಚಾಯತ್..!

- Advertisement -
- Advertisement -

ಕುಂಡಡ್ಕ ಗ್ರಾಮ ಪಂಚಾಯತ್‌ ಅಧ್ಯಕ್ಷರಿಗೆ ಕುಂಡಡ್ಕ ಆಟೋ ಚಾಲಕ- ಮಾಲಕರಿಂದ ದೂರು..!

ಕುಂಡಡ್ಕ ಪರಿಸರದಲ್ಲಿ ನಡೆಯುತ್ತಿರುವ ಗ್ರಾಮ ಪಂಚಾಯತ್‌ನ ಅಭಿವೃದ್ಧಿ ಕಾರ್ಯಗಳ ಭರದಲ್ಲಿ ಸಾರ್ವಜನಿಕರಿಗೆ ಆಸರೆಯಾಗಿದ್ದ, ಮರದ ಕಟ್ಟೆ ಮತ್ತು ಮರವನ್ನು ತೆರವುಗೊಳಿಸಲು ಮುಂದಾಗಿದ್ದು, ಸಾರ್ವಜನಿಕರ ಭಾವನೆಗಳಿಗೆ ನೋವುಂಟುಮಾಡಿದ ಬಗ್ಗೆ ವರದಿಯಾಗಿದೆ. ಈ ಬಗ್ಗೆ ಕುಂಡಡ್ಕ ಗ್ರಾಮ ಪಂಚಾಯತ್‌ ಅಧ್ಯಕ್ಷರಿಗೆ ಕುಂಡಡ್ಕ ಆಟೋ ಚಾಲಕ ಮತ್ತು ಮಾಲಕರು ದೂರು ನೀಡಿದ್ದಾರೆ.

ಕುಂಡಡ್ಕ ರಿಕ್ಷಾ ಪಾರ್ಕಿಂಗ್‌ ಬಳಿ ಕುಂಡಡ್ಕ ಗ್ರಾಮ ಪಂಚಾಯತ್‌ ವತಿಯಿಂದ ಅಭಿವೃದ್ಧಿ ಕಾರ್ಯಗಳು ಭರದಿಂದ ಸಾಗಿತ್ತಿದ್ದು, ಇಲ್ಲಿ ಇರುವ ಮರದ ಕಟ್ಟೆ ಮತ್ತು ಮರವನ್ನು ತೆರವುಗೊಳಿಸಿ ಈ ಸ್ಥಳದಲ್ಲಿ ಬಸ್‌ಸ್ಟ್ಯಾಂಡ್‌ ನಿರ್ಮಿಸಲು ಮುಂದಾಗಿದೆ. ಈ ಬಗ್ಗೆ ಮರದ ಕಟ್ಟೆ ಮತ್ತು ಮರವನ್ನು ತೆರವುಗೊಳಿಸುವುದನ್ನು ನಿಲ್ಲಿಸುವ ಬಗ್ಗೆ ವಿಟ್ಲ ಮುಡ್ನೂರು ಗ್ರಾಮ ಪಂಚಾಯತ್‌ ಅಧ್ಯಕ್ಷರಿಗೆ ಕುಂಡಡ್ಕ ಆಟೋ ಚಾಲಕ ಮತ್ತು ಮಾಲಕರು ದೂರು ನೀಡಿದ್ದಾರೆ.

ಈ ಸ್ಥಳದಲ್ಲಿ ಕಳೆದ ಸುಮಾರು 30 ವರುಷಗಳಿಂದ ಕುಂಡಡ್ಕ ರಿಕ್ಷಾ ಪಾರ್ಕಿಂಗ್‌ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು, ಇಲ್ಲೇ ಇರುವ ಬೃಹತ್‌ ಮರ ಮತ್ತು ಕುಳಿತುಕೊಳ್ಳುವ ಕಟ್ಟೆ ಆಟೋ ಚಾಲಕರ ಪಾಲಿಗೆ ಬಿಸಿಲು, ದಣಿವಿಗೆ ಆಶ್ರಯ ತಾಣವಾಗಿತ್ತು. ಇದೀಗ ಮರದ ಕಟ್ಟೆ ಮತ್ತು ಮರವನ್ನು ತೆರವುಗೊಳಿಸಿ ಬಸ್‌‌ ಸ್ಟ್ಯಾಂಡ್‌ ನಿರ್ಮಿಸುವ ಕಾರ್ಯಕ್ಕೆ ಗ್ರಾಮ ಪಂಚಾಯತ್‌ ಮುಂದಾಗಿದೆ. ಈ ಸ್ಥಳವು ರೋಡ್‌‌ ಮಾರ್ಜಿನ್‌ನಲ್ಲಿದ್ದು, ಇದಕ್ಕೂ ವರುಷಗಳ ಮುಂಚೆ ಅಲ್ಲಿ ಸರ್ಕಾರಿ ಬಸ್‌‌ ಸ್ಟ್ಯಾಂಡ್‌ ನಿರ್ಮಿಸಲು ಅನುಮತಿ ಪಂಚಾಯತ್‌ ಮೂಲಕ ನೀಡಿರುವುದಿಲ್ಲ. ಆದರೆ ಇದೀಗ ಗ್ರಾಮ ಪಂಚಾಯತ್‌ ಅಭಿವೃದ್ಧಿ ಕಾರ್ಯದ ನೆಪದಲ್ಲಿ ಮರದ ಕಟ್ಟೆ ಮತ್ತು ಮರವನ್ನು ತೆರವುಗೊಳಿಸಿ ಬಸ್‌ಸ್ಟ್ಯಾಂಡ್‌ ನಿರ್ಮಿಸಲು ಮುಂದಾಗಿದ್ದು, ಈ ಬಗ್ಗೆ ಆಟೋ ಚಾಲಕ ಮತ್ತು ಮಾಲಕರು ಅಸಮಧಾನ, ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಸ್ಥಳದ ಪಕ್ಕದಲ್ಲೇ ಸರ್ಕಾರಿ ಜಾಗವಿದ್ದು, ಬಸ್‌ಸ್ಟ್ಯಾಂಡ್‌ ನಿರ್ಮಾಣಕ್ಕಾಗಿ ಆ ಸರ್ಕಾರಿ ಜಾಗವನ್ನು ಉಪಯೋಗಿಸಿಕೊಳ್ಳಬಹುದಲ್ಲವೇ.. ? ಇಲ್ಲಿರುವ ಮರದ ಕಟ್ಟೆ ಮತ್ತು ಮರವನ್ನು ತೆರವುಗೊಳಿಸಿಯೇ ಬಸ್‌ಸ್ಟ್ಯಾಂಡ್‌ ನಿರ್ಮಿಸಬೇಕೆ..? ಈ ಬಗ್ಗೆ ಯಾವುದೇ ಪರ್ಯಾಯ ಮಾರ್ಗವಿಲ್ಲವೇ..? ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.

- Advertisement -

Related news

error: Content is protected !!