ವಿಟ್ಲ: ಕುಂಡಡ್ಕ ಶ್ರೀ ವಿಷ್ಣುಮೂರ್ತಿ ದೇವರ ವಾರ್ಷಿಕ ಜಾತ್ರಾ ಮಹೋತ್ಸವವು ಫೆ.12 ಮತ್ತು 13ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ನಡೆಯಲಿದೆ.

ಫೆ.10 ರಂದು ಪ್ರತಿಷ್ಠಾ ವಾರ್ಷಿಕೋತ್ಸವದ ಅಂಗವಾಗಿ ಬೆಳಗ್ಗೆ ಸ್ಥಳ ಶುದ್ಧಿ, 12 ಕಾಯಿ ಗಣಪತಿ ಹವನ, ನವಕ ಪ್ರಧಾನ ಕಲಶ, ಪವಮಾನ ಅಭಿಷೇಕ, ಪಂಚಾಮೃತ ಅಭಿಷೇಕ, ತುಳಸಿ ಅರ್ಚನೆ ಸಹಿತ ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ರಾತ್ರಿ ಶ್ರೀ ರಂಗಪೂಜೆಯು ನಡೆಯಲಿದೆ.

ಫೆ.12 ರಂದು ಬೆಳಗ್ಗೆ ದೇವರ ಮೂಲಸ್ಥಳ ಕುಂಡಡ್ಕ ಬದಿಕೆರೆಯಿಂದ ಕಲಶ ತರುವುದು, ಬಳಿಕ ಕಂಪ ಬನತ್ತಡಿ ಶ್ರೀ ನಾಗದೇವರ ಪ್ರತಿಷ್ಠಾ ವಾರ್ಷಿಕೋತ್ಸವದ ಪ್ರಯುಕ್ತ ಹಾಲು ಅಭಿಷೇಕ, ತಂಬಿಲ ಮತ್ತು ಆಶ್ಲೇಷ ಬಲಿ, ನವಕ ಪ್ರಧಾನ ಕಲಶ, ಗಣಪತಿ ಹವನ, ಕುಂಕುಮಾರ್ಚನೆ, ಬಳಿಕ ಮಹಾ ಮಂಗಳಾರತಿ, ಪ್ರಸಾದ ವಿತರಣೆ, ಸಂಜೆ 6ಕ್ಕೆ ನಿತ್ಯ ಪೂಜೆ, 7ಕ್ಕೆ ಶ್ರೀ ದುರ್ಗಾಪೂಜೆ, 7.30ಕ್ಕೆ ಶ್ರೀ ರಂಗಪೂಜೆ, 8.30 ಕ್ಕೆ ಶ್ರೀದೇವರ ಬಲಿ ಉತ್ಸವ, ಕಟ್ಟೆ ಪೂಜೆ ನಡೆಯಲಿದೆ.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸಂಜೆ 6ರಿಂದ ಒಡಿಯೂರು ಸಾತ್ವಿಕತೇಜ ಕಲಾಕೇಂದ್ರದ ಸದಸ್ಯರಿಂದ ಭಕ್ತ ಪ್ರಹ್ಲಾದ ಯಕ್ಷಗಾನ ಬಯಲಾಟ ನಡೆಯಲಿದೆ.ಫೆ.13 ರಂದು ಬೆಳಿಗ್ಗೆ ಶ್ರೀ ದೇವರ ಬಲಿ ಉತ್ಸವ, ಬಳಿಕ ಶ್ರೀ ದೇವರ ದರ್ಶನ ಬಲಿ, ಬಟ್ಟಲು ಕಾಣಿಕೆ, ಮಹಾಮಂಗಳಾರತಿ ನಡೆಯಲಿದೆ.

ಫೆ.13ರಂದು ನಡೆಯುವ ಕಾರ್ಯಕ್ರಮಗಳ ನೇರಪ್ರಸಾರವು ನಿಮ್ಮ ನೆಚ್ಚಿನ ‘ವಿ ಟಿವಿ’ ಯಲ್ಲಿ ಪ್ರಸಾರವಾಗಲಿದೆ.

