Sunday, June 29, 2025
spot_imgspot_img
spot_imgspot_img

ಕುಂದಾಪುರ: ಶೋರೂಂನಲ್ಲಿ ಬೆಂಕಿ ಅವಘಡ- ಕೋಟ್ಯಾಂತರ ಮೌಲ್ಯದ ವಸ್ತುಗಳು ಬೆಂಕಿಗಾಹುತಿ..!

- Advertisement -
- Advertisement -

ಕುಂದಾಪುರ: ತಾಲೂಕಿನ ತ್ರಾಸಿ ರಾಷ್ಟ್ರೀಯ ಹೆದ್ದಾರಿ ಪಕ್ಕದ ಅಂಬಾ ಟಿವಿ ಸೆಂಟರ್ ಹಾಗೂ ಹೋಮ್ ಅಪ್ಲಯನ್ಸ್‌ಸ್‌ ಶೋರೂಮ್‌ನ ಒಳಭಾಗದಿಂದ ಬೆಂಕಿ ತಗುಲಿದ ಪರಿಣಾಮ ಕೋಟ್ಯಾಂತರ ರೂ. ಮೌಲ್ಯದ ವಸ್ತುಗಳು ಮತ್ತು 3ಲಕ್ಷ ನಗದು ಬೆಂಕಿಗಾಹುತಿಯಾಗಿದೆ.

ಸಂಜೆಯ ಬಳಿಕ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ತಗಲುವ ಶಂಕೆಯಿದ್ದು, ಶೋರೂಮ್ ಒಳಗಿದ್ದ ವಸ್ತುಗಳು ಬಹುಪಾಲು ಸುಟ್ಟು ಹೋಗಿವೆ. ಹೊತ್ತಿ ಉರಿಯುತ್ತಿದ್ದ ಬೆಂಕಿಯನ್ನು ನಂದಿಸಲು ಬೈಂದೂರು, ಕುಂದಾಪುರ ಉಡುಪಿ ಮೂರು ಅಗ್ನಿಶಾಮಕದಳದ ಸಿಬ್ಬಂದಿಗಳಿಂದ ತಡರಾತ್ರಿಯ 3 ಗಂಟೆ ತನಕವೂ ಹರಸಾಹಸಪಟ್ಟಿದ್ದಾರೆ. ಪೊಲೀಸರು ಮತ್ತು ಸ್ಥಳೀಯ ರು ಬೆಂಕಿ ನಂದಿದಲು ಸಾಥ್ ನೀಡಿದ್ದಾರೆ.

ಭಾನುವಾರ ರಜೆ ಇದ್ದುದರಿಂದ ಬೆಂಕಿ ಇದ್ದಿರುವುದು ತಡವಾಗಿ ತಿಳಿದುಬಂದಿದೆ. ಅಷ್ಟರಲ್ಲಿ ಶೋರೂಮ್ ಒಳಭಾಗದಲ್ಲಿ ಬೆಂಕಿ ಆವರಿಸಿಕೊಂಡಿತ್ತು. ಘಟನೆಯಲ್ಲಿ ಲಕ್ಷಾಂತರ ರೂ. ನಷ್ಟ ಸಂಬಂಧಿಸಿದೆ. ಗಂಗೊಳ್ಳಿ ಪೊಲೀಸರು ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ. ಘಟನೆಗೆ ನೈಜ ಕಾರಣ ಹಾಗೂ ನಷ್ಟದ ನಿಖರ ವಿವರ ಇನ್ನಷ್ಟೇ ತಿಳಿದುಬರಬೇಕಿದೆ.

- Advertisement -

Related news

error: Content is protected !!