- Advertisement -
- Advertisement -




ಕುಂದಾಪುರ: ಎದುರಿನಲ್ಲಿ ಸಂಚರಿಸುತ್ತಿದ್ದ ಕಾರಿಗೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಏಕಾಏಕಿ ಬ್ರೇಕ್ ಹಾಕಿದ ಪರಿಣಾಮ ಕಾರೊಂದು ಡಿವೈಡರ್‌ಗೆ ಢಿಕ್ಕಿಯಾಗಿ ಪಲ್ಟಿಯಾದ ಘಟನೆ ಬೀಜಾಡಿಯಲ್ಲಿ ನಡೆದಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕಾರು ಉಡುಪಿ ಕಡೆಯಿಂದ ಜಡ್ಕಲ್ ಕಡೆಗೆ ಸಂಚರಿಸುತ್ತಿತ್ತು ಎನ್ನಲಾಗಿದೆ. ಕಾರು ಸಂಪೂರ್ಣ ಜಖಂಗೊಂಡಿದೆ.
ಬೀಜಾಡಿಯಲ್ಲಿ ಎದುರಿನಿಂದ ಸಂಚರಿಸುತ್ತಿದ್ದ ವ್ಯಾಗನರ್ ಕಾರಿನ ಚಾಲಕ ಬ್ಯಾರಿಕೇಡ್ ಇತ್ತೆಂದು ಬ್ರೇಕ್ ಹಾಕಿದ್ದಾರೆ. ಇದರ ಹಿಂದೆ ಸಂಚರಿಸುತ್ತಿದ್ದ ಕಾರು ವೇಗವಾಗಿ ಬರುತ್ತಿದ್ದ ಕಾರಣ, ಅದರ ಚಾಲಕ ಸಹ ಏಕಾಏಕಿ ಬ್ರೇಕ್ ಹಾಕಿದ್ದರಿಂದ ಆ ಕಾರು ಡಿವೈಡರ್‌ಗೆ ಢಿಕ್ಕಿಯಾಗಿ, ಪಲ್ಟಿಯಾಗಿ, ಸರ್ವಿಸ್ ರಸ್ತೆಯಲ್ಲಿ ನಿಲ್ಲಿಸಿದ್ದ ಟೆಂಪೋಗೆ ಢಿಕ್ಕಿಯಾಗಿದೆ.
- Advertisement -