- Advertisement -
- Advertisement -




ಕುಂದಾಪುರ: ಚಾಲಕನ ನಿಯಂತ್ರಣ ತಪ್ಪಿ ಸ್ಕೋಟಿಯೊಂದು ಡಿವೈಡರ್ ಗೆ ಢಿಕ್ಕಿ ಹೊಡೆದು ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಕುಂದಾಪುರ ರಾಷ್ಟ್ರೀಯ ಹೆದ್ದಾರಿ 66ರ ತಲ್ಲೂರಿನ ಹೇರಿಕುದ್ರು ಸೇತುವೆ ಬಳಿ ನಡೆದಿದೆ.
ಮೃತಪಟ್ಟ ವ್ಯಕ್ತಿ ಮೂಲತಃ ಬೈಂದೂರು ಸಮೀಪದ ನಾಗೂರಿನ ಹಾಗೂ ಪ್ರಸಕ್ತ ಕುಂದಾಪುರ ನಿವಾಸಿಯಾಗಿದ್ದ ಮುಹಮ್ಮದ್ ಫರ್ವೇಝ್ (37) ಎಂದು ಗುರುತಿಸಲಾಗಿದೆ.
ಇವರು ಮುಂಜಾನೆ ಹೆಮ್ಮಾಡಿಯಿಂದ ಕುಂದಾಪುರಕ್ಕೆ ಬರುತ್ತಿದ್ದ ವೇಳೆ ಈ ಅಪಘಾತ ನಡೆದಿದೆ ಎಂದು ತಿಳಿದು ಬಂದಿದೆ. ಮೃತರು ಕುಂದಾಪುರ ಭಂಡಾರ್ಕಾರ್ಸ್ ಕಾಲೇಜಿನ ಹಳೆ ವಿದ್ಯಾರ್ಥಿಯಾಗಿದ್ದು ಉತ್ತಮ ಕ್ರೀಡಾಪಟುವಾಗಿದ್ದರು.ಈ ಬಗ್ಗೆ ಕುಂದಾಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -