Tuesday, March 18, 2025
spot_imgspot_img
spot_imgspot_img

ಕುಂದಾಪುರ: ಬೈಕ್‌ನಲ್ಲಿ ಜಿಂಕೆ ಮಾಂಸ ಸಾಗಾಟ; ಓರ್ವನ ಬಂಧನ‌‌, ಇಬ್ಬರು ಪರಾರಿ..!

- Advertisement -
- Advertisement -

ಕುಂದಾಪುರ: ಬೈಕ್‌ನಲ್ಲಿ ಜಿಂಕೆ ಮಾಂಸ ಸಾಗಾಟ ಮಾಡುತ್ತಿದ್ದ ಓರ್ವ ವ್ಯಕ್ತಿಯನ್ನು ಸಿದ್ದಾಪುರ ವನ್ಯಜೀವಿ ವಲಯದ ಸಿಬ್ಬಂದಿಗಳು ಬಂಧಿಸಿದ್ದು ಇಬ್ಬರು ಪರಾರಿಯಾಗಿದ್ದಾರೆ.

ಬಂಧಿತ ವ್ಯಕ್ತಿಯನ್ನು ಕೊಡ್ಲಾಡಿ ಗ್ರಾಮದ ಜಗದೀಶ್ ಮೇಸ್ತ(49) ಎಂದು ಗುರುತಿಸಲಾಗಿದೆ.

ಇತನನ್ನು ನವೆಂಬರ್ 8 ರ ವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಬಂಧಿತ ವ್ಯಕ್ತಿಯಿಂದ 23kg ಜಿಂಕೆ ಮಾಂಸ, ಬೈಕ್, ಚೂರಿ, ಗನ್ ಪೌಡರ್ ವಶಪಡಿಸಿಕೊಳ್ಳಲಾಗಿದೆ.

ಪ್ರಕರಣವನ್ನು ಕುಂದಾಪುರ ಪ್ರಾದೇಶಿಕ ವಲಯಕ್ಕೆ ಒಪ್ಪಿಸಲಾಗಿದ್ದು ತನಿಖೆ ಮುಂದುವರೆದಿದೆ. ಕಾರ್ಯಾಚರಣೆಯಲ್ಲಿ ಉಪ ವಲಯ ಅರಣ್ಯಾಧಿಕಾರಿ ನಿಂಗಪ್ಪ ವಾಲಿ, ಗುರುರಾಜ್ ಎಸ್ ನಾಯ್ಕ್, ವಿನಯ್, ಸುನಿಲ್ ಗಸ್ತು ಅರಣ್ಯ ಪಾಲಕರಾದ ಸುನಿಲ್, ರಂಜಿತ್, ಗಂಗಾಧರ್, ಕಳ್ಳ ಬೇಟೆ ತಡೆ ಶಿಬಿರದ ಅರಣ್ಯ ವೀಕ್ಷರಾದ ಪ್ರಶಾಂತ್, ಗಿರೀಶ್, ರವೀಶ್, ವಾಹನ ಚಾಲಕರಾದ ಉದಯ್, ಗಣೇಶ್, ಅಶೋಕ್ ಭಾಗವಹಿಸಿದ್ದರು.

- Advertisement -

Related news

error: Content is protected !!