Thursday, May 16, 2024
spot_imgspot_img
spot_imgspot_img

ಪರಪುರುಷನ ಜತೆ ರೆಡ್​ಹ್ಯಾಂಡ್​ ಆಗಿ ಸಿಕ್ಕಿಬಿದ್ದ ಲೇಡಿ ಪೊಲೀಸ್; ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್‌ ಮಾಡಿದ ಪತಿ

- Advertisement -G L Acharya panikkar
- Advertisement -

ಪರಪುರಷನ ಜತೆ ವಿವಾಹೇತರ ಸಂಬಂಧ ಹೊಂದಿದ್ದ ತನ್ನ ಪತ್ನಿಯನ್ನು ವ್ಯಕ್ತಿಯೊಬ್ಬ ಪೊಲೀಸರ ಸಹಾಯದಿಂದ ರೆಡ್​ಹ್ಯಾಂಡ್​ ಆಗಿ ಹಿಡಿದಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಕಾನ್ಪುರ ಮೂಲದ ಮಹಿಳೆ, ವಕೀಲನೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದಳು. ಆಕೆಯನ್ನು ರೆಡ್​ ಹ್ಯಾಂಡ್​ ಆಗಿ ಹಿಡಿದ ಪತಿ ಅದನ್ನು ವಿಡಿಯೋ ರೆಕಾರ್ಡ್​ ಮಾಡಿ, ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ. ವಿಡಿಯೋ ರೆಕಾರ್ಡ್​ ಮಾಡುವುದನ್ನು ನೋಡಿದ ಮಹಿಳೆ ನಿಮ್ಮ ಫೋಟೋಗ್ರಫಿ ಮುಗಿಯಿತಾ ನೀವಿನ್ನೂ ಹೋಗಬಹುದು ಎಂದಿರುವುದು ಗಂಡನಿಗೆ ಒಂದು ಕ್ಷಣ ಗರಬಡಿದಂತಾಗಿದೆ.

ಮಹಿಳೆಯು ಪೊಲೀಸ್​ ಕಾನ್‌ಸ್ಟೇಬಲ್​ ಆಗಿದ್ದು, ಸರ್ಕಾರಿ ಕ್ವಾಟ್ರಸ್​ನಲ್ಲಿ ವಾಸವಿದ್ದಾರೆ. ಅದೇ ನಿವಾಸದಲ್ಲಿ ವಕೀಲನೊಂದಿಗೆ ಸಿಕ್ಕಿಬಿದ್ದಿದ್ದಾರೆ. ಈಕೆಯ ಪತಿ ಕೇಂದ್ರೀಯ ಮೀಸಲು ಪೊಲೀಸ್ ಪಡೆ ಯಲ್ಲಿ ಸೇವೆ ಸಲ್ಲಿಸುತ್ತಿರುವ ಕಾನ್‌ಸ್ಟೇಬಲ್. ಪ್ರಸ್ತುತ ಆಕೆಯನ್ನು ಫ್ಯಾಮಿಲಿ ಕೌನ್ಸಿಲಿಂಗ್ ಸೆಂಟರ್‌ನಲ್ಲಿ ನಿಯೋಜನೆಗೊಳಿಸಲಾಗಿದೆ. ದಂಪತಿ ನಡುವೆ ಮನಸ್ತಾಪವಿದ್ದು, ಇಬ್ಬರ ಡಿವೋರ್ಸ್​ ಕೇಸ್​ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ. ಪತಿಯಿಂದ ದೂರಾದ ಬಳಿಕ ವಕೀಲರೊಬ್ಬರ ಜತೆ ಮಹಿಳಾ ಪೇದೆ ಅನೈತಿಕ ಸಂಬಂಧ ಹೊಂದಿರುವುದು ಪತ್ತೆಯಾಗಿದೆ. ಇಬ್ಬರೂ ಆಗಾಗ ಗೌಪ್ಯವಾಗಿ ಭೇಟಿಯಾಗುತ್ತಿದ್ದರು ಎನ್ನಲಾಗಿದೆ.

ಘಟನೆಯ ಬಗ್ಗೆ ಕೊತ್ವಾಲಿ ಇನ್ಸ್‌ಪೆಕ್ಟರ್ ಸೂರ್ಯಬಾಲಿ ಪಾಂಡೆ ಮಾತನಾಡಿದ್ದು, ಮಹಿಳಾ ಕಾನನ್ಸ್​ಟೆಬಲ್ ಪ್ರಸ್ತುತ ತನ್ನ ಪತಿಯೊಂದಿಗೆ ವಿಚ್ಛೇದನ ಪ್ರಕ್ರಿಯೆಯಲ್ಲಿ ತೊಡಗಿಕೊಂಡಿದ್ದಾಳೆ. ಸಂಧಾನ ಸ್ಥಿತಿಯಲ್ಲಿ ಸಿಕ್ಕಿಬಿದ್ದ ವ್ಯಕ್ತಿಯ ಜತೆ ಆಕೆ ಲಿವಿಂಗ್​ ಟುಗೆದರ್ ಸಂಬಂಧದಲ್ಲಿದ್ದಾರೆ ಎಂದು ವರದಿಯಾಗಿದೆ. ಸದ್ಯಕ್ಕೆ ಯಾರ ವಿರುದ್ಧವೂ ಪ್ರಕರಣ ದಾಖಲಿಸಿಲ್ಲ ಮತ್ತು ಇಬ್ಬರನ್ನೂ ಬಿಡುಗಡೆ ಮಾಡಲಾಯಿತು. ಆದರೆ, ಪೊಲೀಸ್ ಇಲಾಖೆಗೆ ಕಳಂಕ ತಂದಿರುವ ಮಹಿಳಾ ಪೇದೆ ವಿರುದ್ಧ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಿ ಪತ್ರ ಬರೆಯಲಾಗಿದೆ ಎಂದು ತಿಳಿಸಿದ್ದಾರೆ.

- Advertisement -

Related news

error: Content is protected !!