ಗೆಲುವಿನ ಅಂತರ ಎಷ್ಟು? ಯಾರ್‍ಯಾರಿಗೆ ಎಷ್ಟು ಮತ? ..! ಇಲ್ಲಿದೆ ಕಂಪ್ಲೀಟ್ ಡಿಟೈಲ್ಸ್
ಗೆಲುವಿನ ಬಳಿಕ ಬಿಜೆಪಿ ಅಭ್ಯರ್ಥಿ ಕಿಶೋರ್ ಕುಮಾರ್ ಫಸ್ಟ್ ರಿಯಾಕ್ಷನ್


ಮಂಗಳೂರು: ವಿಧಾನ ಪರಿಷತ್ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಕಿಶೋರ್ ಕುಮಾರ್ ಪುತ್ತೂರು ಜಯ ಗಳಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಕಿಶೋರ್ ಕುಮಾರ್ ಕಾಂಗ್ರೇಸ್ ಅಭ್ಯರ್ಥಿ ರಾಜು ಪೂಜಾರಿಯ ವಿರುದ್ಧ ಒಟ್ಟು 1697 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಕಳೆದ ಬಾರಿ ಕೋಟಾ ಶ್ರೀನಿವಾಸ್ ಪೂಜಾರಿ 1593 ಮತಗಳ ಅಂತರದೊಂದಿಗೆ ಗೆಲುವು ಸಾಧಿಸಿದ್ದರು.

ಈ ಬಾರಿ ಯಾರಿಗೆ ಎಷ್ಟು ಮತ?
ಬಿಜೆಪಿ ಅಭ್ಯರ್ಥಿ ಕಿಶೋರ್ ಕುಮಾರ್: 3,654
ಕಾಂಗ್ರೆಸ್ ಅಭ್ಯರ್ಥಿ ರಾಜು ಪೂಜಾರಿ: 1,957
SDPI -195
IND -9
ಅಸಿಂಧು- 87
ಬಿಜೆಪಿ 1697 ಮುನ್ನಡೆ
ಅಭೂತ ಪೂರ್ವ ಗೆಲುವಿನ ಬಳಿಕ ಮೊದಲ ಬಾರಿಗೆ ಮಾಧ್ಯಗಳಿಗೆ ಪ್ರತಿಕ್ರಿಯಿಸಿದ ಕಿಶೋರ್ ಕುಮಾರ್ ’ಇದು ಭಾರತೀಯ ಜನತಾ ಪಾರ್ಟಿಯ ಎಲ್ಲಾ ಕಾರ್ಯಕರ್ತರ ಗೆಲುವು. ಎರಡೂ ಜಿಲ್ಲೆಯ ಮೂರು ಸಂಸದರುಗಳ, ಎಲ್ಲಾ ಶಾಸಕರುಗಳ, ಎಲ್ಲಾ ಅಧ್ಯಕ್ಷರುಗಳ, ಎಲ್ಲಾ ಪದಾಧಿಕಾರಿಗಳ ಮತ್ತು ಬೂತ್ ಮಟ್ಟದ ಎಲ್ಲಾ ಕಾರ್ಯಕರ್ತರ ಗೆಲುವು. ಕಳೆದ 30 ವರ್ಷದಲ್ಲಿ ಬಿಜೆಪಿಯ ಹಲವಾರು ಜವಬ್ದಾರಿಗಳನ್ನು ನಿಭಾಯಿಸಿಕೊಂಡು ಬಂದಿದ್ದೇನೆ. ಒಬ್ಬ ಕೃಷಿಕರ ಮಗನಾಗಿದ್ದು, ನಾನೂ ಒಬ್ಬ ಕೃಷಿಕನಾಗಿ ಜೊತೆಗೆ ಸಾಮಾನ್ಯ ಕಾರ್ಯಕರ್ತನಾಗಿ ಜನರ ಕಷ್ಟಗಳನ್ನು ತುಂಬಾ ಹತ್ತಿರದಿಂದ ನೋಡಿದ್ದೇನೆ. ಜನರಿಗೆ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಬಲಪಡಿಸುವುದರ ಮೂಲಕ ಸಂಸದರು ಕೋಟಾ ಶ್ರೀನಿವಾಸ್ ಪೂಜಾರಿ, ರಾಜ್ಯಾಧ್ಯಕ್ಷರ, ಹಾಗೂ ಎರಡೂ ಜಿಲ್ಲೆಗಳ ಶಾಸಕರ ಸಂಸದರ ಮಾರ್ಗದರ್ಶನದಂತೆ ಈ ಸ್ಥಾನಕ್ಕೆ ಯಾವುದೇ ಚ್ಯುತಿ ಬಾರದಂತೆ ನ್ಯಾಯ ಒದಗಿಸುತ್ತೇನೆ ಎಂದು ಹೇಳಿದರು.
