Sunday, June 29, 2025
spot_imgspot_img
spot_imgspot_img

ಬದುಕಿನಲ್ಲಿ ದಾರಿ ತಪ್ಪದಿರೋಣ..!!

- Advertisement -
- Advertisement -

✍️ – ಸಲೀಂ ಮಾಣಿ

ಮದುವೆ ಮನೆಗೋ, ಗೃಹ ಪ್ರವೇಶ ಅಥವಾ ಇನ್ನಿತರ ಕಾರ್ಯಕ್ರಮಗಳಿಗೆ ಎಂದು ಬೇರೆ ಊರಿಗೆ ಹೋಗವವರಿಗೆ ಎದುರಾಗುವ ತೊಂದರೆ ಏನೆಂದರೆ ಪ್ರಮುಖ ಅಥವಾ ಒಳ ರಸ್ತೆಗಳಲ್ಲಿ ದಾರಿ ಸೂಚಕ ಫಲಕಗಳು ಇಲ್ಲದೇ ಇರುವುದು. ಇದರಿಂದ ಉಂಟಾಗುವ ತೊಂದರೆಗಳು ಅಷ್ಟಿಷ್ಟಲ್ಲ ಅಮೂಲ್ಯವಾದ ಸಮಯ ನಷ್ಟವಾಗುವುದರೊಂದಿಗೆ ನಟಂತಿರುಗಿ ತಿರುಗಿ ಬೇಸರಗೊಳ್ಳಬೇಕಾಗುತ್ತದೆ. ಕೆಲವೊಂದು ಕಡೆ ಪಂಚಾಯತ್ ವತಿಯಿಂದ ಸ್ಥಳೀಯ ಆಡಳಿತ ವತಿಯಿಂದ ಆಯಾ ರಸ್ತೆಗಳ ಪ್ರವೇಶದ ಕಡೆ ಇದು ಎಲ್ಲಿಗೆಲ್ಲಾ ಹೋಗಬಹುದು ಎಂಬ ಸೂಚಕ ಫಲಕಗಳು ಅಳವಡಿಸಿರುತ್ತಾರೆ,ಆದರೆ ಹೆಚ್ಚಿನ ಕಡೆ ಅದರಲ್ಲೂ ಹಳ್ಳಿ ಪ್ರದೇಶ ಒಳ ರಸ್ತೆಗಳು ಹೀಗೆ ದಾರಿ ಸೂಚಕ ಫಲಕ ಇಲ್ಲದೆ ಬಹಳ ತೊಂದರೆ ನೀಡುತ್ತದೆ.

ಯಾರಲ್ಲಾದರೂ ಕೇಳಿ ಮುಂದೆ ಹೋಗೋಣ ಅಂದರೆ ಅಲ್ಲಿ ಮನುಷ್ಯರು ಬಿಡಿ ಪ್ರಾಣಿಗಳು ಕೂಡಾ ಇರುವುದಿಲ್ಲ. ಇಂತಹ ಸಂಧಿಗ್ಧ ಪರಿಸ್ಥಿತಿಯನ್ನು ಅನುಭವಿಸಿದವರೇ ಹೆಚ್ಚು, ಎಲ್ಲದಕ್ಕೂ ಗೂಗಲ್ ಮ್ಯಾಪ್ ಬಳಸಲು ಆಗುವುದಿಲ್ಲ ಮತ್ತು ಎಲ್ಲರಿಗೂ ಅದರ ಅರಿವು ಇರುವುದಿಲ್ಲ ಕೆಲವೊಮ್ಮೆ ಗೂಗಲ್ ಮ್ಯಾಪ್ ಮದುವೆಗೆ ಹೊರಟವರನ್ನು ಗೃಹ ಪ್ರವೇಶಕ್ಕೆ ಕರೆದೊಯ್ದ ಉದಾಹರಣೆಗಳೇ ಹೆಚ್ಚು. ಆದ್ದುದ್ದರಿಂದ ಗ್ರಾಮ ಪಂಚಾಯತ್ ವತಿಯಿಂದ ಅಥವಾ ಊರಿನ ಯಂಗ್ ಮೆನ್ಸ್ ಗಳು ತಮ್ಮ ತಮ್ಮ ಊರಿನ ಒಳ ಪ್ರವೇಶದ ರಸ್ತೆಗಳಲ್ಲೆಲ್ಲಾ ಇದು ಯಾವ ಕಡೆ ತೆರಳುವ ರಸ್ತೆ ಎಂಬ ಸೂಚಕ ನಾಮ ಫಲಕ ಹಾಕಿ ಅತೀ ಅಗತ್ಯವಾದ ಸಮಾಜಸೇವೆ ಮಾಡುವ ಮೂಲಕ ದೊಡ್ಡದೊಂದು ಸಮಸ್ಯೆಯನ್ನು ಇಲ್ಲವಾಗಿಸಲು ಪ್ರಯತ್ನಿಸಿರಿ,ಸಮಯ ಅಮೂಲ್ಯವಾದದ್ದು ಜನರು ಬದುಕಿನಲ್ಲಿ ದಾರಿ ತಪ್ಪದಿರಲಿ.

✍️ – ಸಲೀಂ ಮಾಣಿ

- Advertisement -

Related news

error: Content is protected !!