Tuesday, July 21, 2026
spot_imgspot_img
spot_imgspot_img

ಕಡೇಶಿವಾಲಯದಲ್ಲಿ ಮನೆಗೆ ಸಿಡಿಲಾಘಾತ-ಪವಾಡ ಸದೃಶರಾಗಿ ಪಾರಾದ ಮನೆಮಂದಿ; ಶಾಸಕರ ಭೇಟಿ

- Advertisement -
- Advertisement -

ನಿನ್ನೆ ಸುರಿದ ಭಾರೀ ಮಳೆಗೆ ಕಡೇಶಿವಾಲಯದ ನೆತ್ತರ ಎಂಬಲ್ಲಿನ ಶ್ರೀ. ಬಾಬು ಪೂಜಾರಿಯವರ ಮನೆಗೆ ತೀರ್ವ ತೆರನಾದ ಸಿಡಿಲು ಬಡಿದಿದ್ದು, ಮನೆಯಲ್ಲಿದ್ದ 7 ಮಂದಿ ಹಾಗು ಮಕ್ಕಳು ತಕ್ಷಣ ಹೊರಗೋಡಿ ಪವಾಡಸದೃಶರಾಗಿ ಪಾರಾಗಿದ್ದಾರೆ‌‌. ಮನೆ ಸಂಪೂರ್ಣ ಜಖಂಗೊಂಡಿದ್ದು ಲಕ್ಷಾಂತರ ರೂಪಾಯಿ ನಷ್ಟವಾಗಿದೆ‌ .

ಇಂದು ಬಂಟ್ವಾಳ ಶಾಸಕರಾದ ಮಾನ್ಯ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಮನೆಗೆ ಭೇಟಿ ನೀಡಿ ಹಾನಿಯನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.ಈ ಸಂಧರ್ಭದಲ್ಲಿ ಬಿ‌.ಜೆ.ಪಿ ಯುವಮೋರ್ಚಾ ತಾಲೂಕು ಪ್ರಧಾನ ಕಾರ್ಯದರ್ಶಿ ಸಂಪತ್ ಕೋಟ್ಯಾನ್ ಕಡೇಶಿವಾಲಯ , ಹಾಗು ಪ್ರಮುಖರಾದ ಸುರೇಶ್ ಕನ್ನೊಟ್ಟು , ಸುರೇಶ್ ಬನಾರಿ, ದೇವಿಪ್ರಸಾದ್,ಶಿವಾನಂದ ,ಹಾಗು ದೇವದಾಸ್ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.‌

- Advertisement -

Related news

error: Content is protected !!