



ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ಕೇಪು ಗ್ರಾಮ ( ಸಾರಡ್ಕ) ದ ಕು:- ಲಿಖಿತ್ ಎಲ್ ಎನ್ ಸಾರಡ್ಕ್ ಇವರಿಗೆ ದಿನಾಂಕ 25-05-2025 ರಂದು ಬಳ್ಳಾರಿ ಜಿಲ್ಲೆಯ ತಾಳೂರಿನ ನಕ್ಷತ್ರ ಸಾಹಿತ್ಯ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಟ್ರಸ್ಟ್ ನೀಡುವ ಪ್ರತಿಷ್ಠಿತ ” ಸಾಹಿತ್ಯ ನವಚೇತನ ರಾಷ್ಟ್ರ ಪ್ರಶಸ್ತಿ ” ದೊರಕಿದೆ.


ಇವರು ಅಳಿಕೆಯಲ್ಲಿ ಪ್ರಸ್ತುತ 9 ನೇ ತರಗತಿ ಮುಗಿಸಿ 10 ನೇ ತರಗತಿಗೆ ಪಾದರ್ಪಣೆ ಮಾಡಿದ್ದು, ಸಂಗೀತ ಯಕ್ಷಗಾನ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮನ್ಮ ತಾವು ತೋಡಿಗಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಪ್ರತಿನಿತ್ಯ ಕರ್ನಾಟಕದ ಎಲ್ಲಾ ಸಾಹಿತ್ಯ ಬಳಗದಲ್ಲಿ ಸಾಹಿತ್ಯದ ಎಲ್ಲ ಪ್ರಕಾರದ ಕವಿತೆ ಬರೆಯುವದರ ಜೊತೆಗೆ ಸ್ಪರ್ಧೆಯಲ್ಲಿ ಬಾಗವಹಿಸಿ ಹಲವಾರು ಅಭಿನಂದನಾ ಪತ್ರ ಪ್ರಶಸ್ತಿ ಪತ್ರ ಪಡೆದುಕೊಂಡಿದ್ದಾರೆ.
ಚಿಕ್ಕ ವಯಸ್ಸಿನಲ್ಲಿ ಇಷ್ಟೊಂದು ಸಾಧನೆ ಮಾಡುತ್ತಾ ಇರುವುದು ಖುಷಿಯ ವಿಷಯ. ಇನ್ನು ಇವರು ಹಲವಾರು ಸಾಹಿತ್ಯ ಪುಸ್ತಕ ಬರೆದು ಬಿಡುಗಡೆಗೊಳಿಸಲಿ ಸರಕಾರ ಇಂತಹ ಪ್ರತಿಭೆಗಳನ್ನು ಗುರುತಿಸಿ ಗೌರವಿಸುವಂತಾಗಲಿ ಹಾಗೆ ಮುಂದೆ ದೊಡ್ಡ ಮಟ್ಟದಲ್ಲಿ ಗುರುತಿಸಿಕೊಂಡು ಕನ್ನಡಾಂಬೆಯ ಕೀರ್ತಿ ಬೆಳಗಿಸಲಿ.