Saturday, November 2, 2024
spot_imgspot_img
spot_imgspot_img

ವಿಟ್ಲ : ಲಯನ್ಸ್ ಕ್ಲಬ್ ವಿಟ್ಲ ಇದರ ವತಿಯಿಂದ ಶಿಕ್ಷಕರ ದಿನಾಚರಣೆಯ ಅಂಗವಾಗಿ ಮೂವರು ಶಿಕ್ಷಕರಿಗೆ ಗೌರವಾರ್ಪಣೆ

- Advertisement -
- Advertisement -

ವಿಟ್ಲ : ಲಯನ್ಸ್ ಕ್ಲಬ್ ವಿಟ್ಲ ಇದರ ವತಿಯಿಂದ ಶಿಕ್ಷಕರ ದಿನಾಚರಣೆ ವಿಟ್ಲ ಕ್ಲಬ್ಬಿನ ಸಪ್ಟೆಂಬರ್ ಸಂಚಿಕೆ ಬಿಡುಗಡೆ ಮಾಡಲಾಯಿತು.

ವಿಟ್ಲ ಲಯನ್ಸ್ ಕ್ಲಬ್ ಇದರ ಅಧ್ಯಕ್ಷರಾದ ರಜಿತ್ ಆಳ್ವ ಎರ್ಮೆನಿಲೆ ಇವರ ಅಧ್ಯಕ್ಷತೆಯಲ್ಲಿ ಶಿಕ್ಷಕರ ದಿನಾಚರಣೆಯ ಅಂಗವಾಗಿ ನಿವೃತ ಶಿಕ್ಷಕರಾದ ಸಂಕಪ್ಪ ಗೌಡ ಅಳಿಕೆ, ಆರ್ ಎಂ ಎಸ್ ಎ ವಿಟ್ಲ ಇದರ ಹಿರಿಯ ಶಿಕ್ಷಕರಾದ ಪ್ರೇಮಲತಾ, ಹಾಗೂ ಖ್ಯಾತ ಕರಾಟೆ ಪಟು ಹಾಗೂ ಮಾಧವ ಅಳಿಕೆ ಇವರುಗಳಿಗೆ ಗೌರವಾರ್ಪಣೆ ಸಲ್ಲಿಸಲಾಯಿತು.

ಗೌರವ ಸ್ವೀಕರಿಸಿದ ಸಂಕಪ್ಪ ಗೌಡರು ವಿಟ್ಲ ಲಯನ್ಸ್ ಒಂದು ಸೇವಾ ಸಂಸ್ಥೆಯಾಗಿದ್ದು ಹಲವು ಸಮಾಜಮುಖಿ ಸೇವಾ ಕಾರ್ಯಗಳನ್ನು ಹಮ್ಮಿಕೊಳ್ಳುತ್ತಿದ್ದು ತನ್ನಿಂದ ಇನ್ನಷ್ಟು ಸಮಾಜಕ್ಕೆ ದೊರಕಲಿ ಎಂಬ ಮಾತನಾಡಿದರು ಹಾಗೂ ಗೌರವಿಸಿದ್ದಕ್ಕೆ ಅಭಿನಂದಿಸಿದರು.

ಇದೇ ಸಂದರ್ಭದಲ್ಲಿ ಸಂಸ್ಥೆಯ ವಾರ್ಷಿಕ ಸಂಚಿಕೆ ವಿಠಲಯನ್ ಇದರ ಬಿಡುಗಡೆಯನ್ನು ಲಯನ್ ಸುದೇಶ್ ಭಂಡಾರಿ ಶುಭ ಹಾರೈಸಿದರು ಮುಖ್ಯ ಅತಿಥಿಯಾಗಿ ಜೆ. ಸಿ. ಐ ಅಧ್ಯಕ್ಷರು ಸಂತೋಷ್ ಕುಮಾರ್ ಶೆಟ್ಟಿ, ಲಯನ್ಸ್ ನ ಪ್ರಾಂತೀಯ ಅಧ್ಯಕ್ಷರಾದ ಲಯನ್ ಪಾವನ್ ರಾಮ್, ಮಾಜಿ ಜಿಲ್ಲಾ ಗವರ್ನರ್ ಲಯನ್ ಡಾ. ಗೀತ ಪ್ರಕಾಶ್, ಲಯನ್ ಪ್ರಭಾಕರ ಶೆಟ್ಟಿ ಅಧ್ಯಕ್ಷರು ಲಯನ್ಸ್ ಸೇವಾ ಟ್ರಸ್ಟ್ , ನಿಕಟ ಪೂರ್ವ ಅಧ್ಯಕ್ಷರಾದ ಲಯನ್ ಜಲಜಾಕ್ಷಿ ಬಾಲಕೃಷ್ಣ ಗೌಡ, ಲಯನ್ಸ್ ಕ್ಲಬ್ ವಿಟ್ಲ ಇದರ ಕಾರ್ಯದರ್ಶಿ ಅರವಿಂದ ರೈ ಮೂರ್ಜೆಬೆಟ್ಟು, ಕೋಶಾಧಿಕಾರಿ ಮನೋಜ್ ರೈ ವಿಟ್ಲ, ಮೋನಿಶ್ ,ಲಿಯೊ ಕ್ಲಬ್ ವಿಟ್ಲ ಅಧ್ಯಕ್ಷರು ಹಾಗೂ ಲಯನ್ಸ್ ಕ್ಲಬ್ ವಿಟ್ಲ ಇದರ ಪದಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದರು.

- Advertisement -

Related news

error: Content is protected !!