Wednesday, July 3, 2024
spot_imgspot_img
spot_imgspot_img

ವಿಟ್ಲ : ಲಯನ್ಸ್ ಕ್ಲಬ್ ವಿಟ್ಲ ಸಿಟಿಯ ನೂತನ ಪದಾಧಿಕಾರಿಗಳ 2024 25 ನೇ ಸಾಲಿನ ಪದಗ್ರಹಣ ಸಮಾರಂಭ

- Advertisement -G L Acharya panikkar
- Advertisement -

ವಿಟ್ಲ : ಲಯನ್ಸ್ ಕ್ಲಬ್ ವಿಟ್ಲ ಸಿಟಿಯ ನೂತನ ಪದಾಧಿಕಾರಿಗಳ 2024 25 ನೇ ಸಾಲಿನ ಪದಗ್ರಹಣ ಸಮಾರಂಭವು ಜಯರಾಮ್ ಬಲ್ಲಾಳ್ ಇವರ ಅಧ್ಯಕ್ಷತೆಯಲ್ಲಿ ಜರಗಿತು,

ಪದಗ್ರಹಣ ಅಧಿಕಾರಿಯಾಗಿ ಲಯನ್ಸ್ ಜಿಲ್ಲಾ 317D ಯ ಪ್ರಥಮ ಉಪರಾಜ್ಯಪಾಲರಾದ ಲಯನ್ ಕುಡುಪಿ ಅರವಿಂದ ಶೆಣೈPMJF. ಅವರು ನೂತನ ಅಧ್ಯಕ್ಷರಾದ ಲಯನ್ ವಸಂತ್ ಶೆಟ್ಟಿ ಎರ್ಮೆ ನಿಲೆ, ಕಾರ್ಯದರ್ಶಿ ಶ್ವೇತಾ ರವಿಕುಮಾರ್, ಕೋಶಾಧಿಕಾರಿಯಾಗಿ ದಿನಕರ ಆಳ್ವ, ವಿಟ್ಲ, ಇವರ ನೂತನ ತಂಡಕ್ಕೆ ಪ್ರತಿಜ್ಞಾವಿಧಿಯನ್ನು ಬೋಧಿಸಿದರು.

ಇದೇ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಲಯನ್ ಜಗದೀಶ್ ಎಡಪಡಿತಾಯ,MJF ಚೀಫ್ ಡಿಸ್ಟ್ರಿಕ್ಟ್ ಕೋರ್ಡಿನೇಟರ್, ಗ್ಲೋಬಲ್ ಕೋಸಸ್, ಇವರು ಸ್ಥಾಪಕರ ದಿನಾಚರಣೆಯನ್ನು ನೂತನ ಅಧ್ಯಕ್ಷರೊಂದಿಗೆ ದೀಪ ಬೆಳಗಿಸಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಸ್ಥಾಪಕ ಸದಸ್ಯರನ್ನು ಗೌರವಿಸಲಾಯಿತು.

ಸನ್ಮಾನ ಲಯನ್ಸ್ ಸದಸ್ಯರ ಮತ್ತು ಆರ್ ಸಿ ಎಮ್ ಎಸ್ ವಿಟ್ಲ ಆಟೋ ಚಾಲಕ ಮಾಲಕರ ಸಂಘದ ಸದಸ್ಯರ ಮಕ್ಕಳಲ್ಲಿಎಸ್ ಎಸ್ ಎಲ್ ಸಿ ಹಾಗೂ ಸೆಕೆಂಡ್ ಪಿಯುಸಿ ತರಗತಿಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳನ್ನು ಸಹಾಯಧನ ನೀಡಿ ಗೌರವಿಸಲಾಯಿತು.
ರಿಕ್ಷಾ ಚಾಲಕರ ಮಾಲಕರ ಸಂಘದ ಅಧ್ಯಕ್ಷರಾದ ಹರಿಣಾಕ್ಷ ಅವರ ವೈದ್ಯಕೀಯ ವೆಚ್ಚಕ್ಕಾಗಿ ರೂ 5,000ವನ್ನು ಜಿಲ್ಲಾ ಎಲ್ ಸಿ ಎಫ್ ಕ
ಕೋರ್ಡಿನೇಟರ್ ಚಂದ್ರಹಾಸ ರೈ ನೀಡಿ ಸಹಕರಿಸಿದರು.

ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ವಿಟ್ಲ ಸಿಟಿಗೆ ನೂತನ ಸದಸ್ಯರಾಗಿ ಸೇರ್ಪಡೆಗೊಂಡ ಡಾಕ್ಟರ್ ರೂಪಲತಾ, ಸತೀಶ್ ಕುಲಾಲ್, ಕೃಷ್ಣಪ್ಪ ಕುಲಾಲ್, ಇವರಿಗೆ ಲಯನ್ ಕುಡುಪಿ ಅರವಿಂದ ಶೆಣೈ, PMJF, ಯವರು ಪ್ರತಿಜ್ಞಾವಿಧಿ ಬೋಧಿಸಿದರು.
ಇದೇ ಸಂದರ್ಭದಲ್ಲಿ ಗಾಯಕಿ ಕುಮಾರಿ ಜನ್ಯ ಪ್ರಸಾದ್ ಅನಂತಾಡಿ, ಕರ್ನಾಟಕ ರಾಜ್ಯ ಬ್ಯಾರಿ ಸಾಹಿತ್ಯ ಅಕಾಡೆಮಿಯ ಸದಸ್ಯರಾದ ಅಬೂಬಕ್ಕರ್ ಅನಿಲ ಕಟ್ಟೆ, ಮತ್ತು ಬಹು ಮುಖ್ಯ ಪ್ರತಿಭೆ ಬಾಲ ಕಲಾವಿದ ರಿಷಿತ್ ರಾಜ್ ವಿಟ್ಲ, ಇವರೆಲ್ಲರನ್ನು ಕ್ಲಬ್ ನ ವತಿಯಿಂದ ಗೌರವಿಸಲಾಯಿತು.

ಇದೇ ಸಂದರ್ಭದಲ್ಲಿ ಪ್ರಥಮ ಉಪ ರಾಜ್ಯಪಾಲ ದಂಪತಿಗಳನ್ನು, ಹಾಗೂ ಮುಖ್ಯ ಅತಿಥಿ ಜಗದೀಶ್ ಎಡಪಡಿತಾಯ ದಂಪತಿಗಳನ್ನು ಕ್ಲಬ್ ನ ವತಿಯಿಂದ ಗೌರವಿಸಲಾಯಿತು. ಹಾಗೆಯೇ ನಿಕಟಪೂರ್ವ ಅಧ್ಯಕ್ಷ , ಕಾರ್ಯದರ್ಶಿ ಕೋಶಾಧಿಕಾರಿಗಳನ್ನು ಗೌರವಿಸಲಾಯಿತು,


ಈ ಕಾರ್ಯಕ್ರಮದ ವೇದಿಕೆಯಲ್ಲಿ ಪ್ರಾಂತೀ ಅಧ್ಯಕ್ಷರಾದ ಯುಜಿನ್ ಲೋಬೊ, ವಲಯ ಅಧ್ಯಕ್ಷರಾದ ಡೊನಾಲ್ಡ್, ನಿಕಟ ಪೂರ್ವ ಪ್ರಾಂತ್ಯ ಅಧ್ಯಕ್ಷರಾದ ಸುದರ್ಶನ್ ಪಡಿಯರ್, ಮಾಜಿ ಪ್ರಾಂತ್ಯ ಅಧ್ಯಕ್ಷರಾದ ಕೃಷ್ಣಪ್ರಶಾಂತ್, ನೂತನ ಉಪಾಧ್ಯಕ್ಷರಾದ ಓ ಎ ಕೃಷ್ಣ MJF, ಮತ್ತು ಉಪಾಧ್ಯಕ್ಷರಾದ ಮೋಹನ್ ಕಟ್ಟೆ, ಮುಂತಾದವರು ಉಪಸ್ಥಿತರಿದ್ದರು.
ಸುದರ್ಶನ್ ಪಡಿಯಾರ್ ಸ್ವಾಗತಿಸಿ, ಕಾರ್ಯದರ್ಶಿ ಶ್ವೇತ ರವಿಕುಮಾರ್ ವಂದಿಸಿದರು.
ನೂತನ ವಲಯ ಅಧ್ಯಕ್ಷರಾದ ಶ್ರೀ ಬಿ. ಸಂದೇಶ್ ಶೆಟ್ಟಿ ಬಿಕ್ನಾಜೆ ಕಾರ್ಯಕ್ರಮ ನಿರೂಪಿಸಿದರು.
ಲಯನ್ಸ್ ಕ್ಲಬ್ ವಿಟ್ಲ ಸಿಟಿಯ ಎಲ್ಲಾ ಸದಸ್ಯರು ಕಾರ್ಯಕ್ರಮ ಯಶಸ್ವಿಯಾಗಿ ನಡೆಯುವಲ್ಲಿ ಸಹಕರಿಸಿದರು.

- Advertisement -

Related news

error: Content is protected !!