- Advertisement -
- Advertisement -






ವಿಟ್ಲ: ಲಯನ್ಸ್ ಇಂಟರ್‌ನ್ಯಾಷನಲ್ ಜಿಲ್ಲೆ 317-D, ರೀಜನ್ VII, ಝೋನ್ 1 ವ್ಯಾಪ್ತಿಯ ಲಯನ್ಸ್ ಹಾಗೂ ಲಿಯೋ ಕ್ಲಬ್ ವಿಟ್ಲದ 2026-27ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಹಾಗೂ ಚಾರ್ಟರ್ ನೈಟ್ ಸಂಭ್ರಮವು ಜೂನ್ 20ರಂದು ಸಂಜೆ 6.30ಕ್ಕೆ ಸಿಂಹಗಿರಿ ಸಮೀಪದ ಒಕ್ಕೆತ್ತೂರು ಸೇತುವೆ ಬಳಿಯ ಲಯನ್ಸ್ ಸೇವಾ ಭವನದಲ್ಲಿ ನಡೆಯಲಿದೆ.
ನೂತನ ಅಧ್ಯಕ್ಷೆಯಾಗಿ ಲಯನ್ ಡಾ. ಗಾಯತ್ರಿ ಜಿ. ಪ್ರಕಾಶ್ ಹಾಗೂ ಅವರ ತಂಡದ ಪದಾಧಿಕಾರಿಗಳನ್ನು ಡಿಸ್ಟ್ರಿಕ್ಟ್ 317-Dರ ಪ್ರಥಮ ಉಪ ಜಿಲ್ಲಾ ಗವರ್ನರ್(ಇ) ಲಯನ್ ಗೋವರ್ಧನ್ ಶೆಟ್ಟಿ ಪದಗ್ರಹಣಗೊಳಿಸಲಿದ್ದಾರೆ.
ಚಾರ್ಟರ್ ನೈಟ್ ಕಾರ್ಯಕ್ರಮವನ್ನು ಡಿಸ್ಟ್ರಿಕ್ಟ್ ಕಲ್ಚರಲ್ ಈವೆಂಟ್ ಚೇರ್‌ಪರ್ಸನ್ ಲಯನ್ ಸ್ವರೂಪಾ ಶೆಟ್ಟಿ ಉದ್ಘಾಟಿಸಲಿದ್ದಾರೆ.
- Advertisement -








