Tuesday, May 14, 2024
spot_imgspot_img
spot_imgspot_img

ಮದ್ಯ ಪ್ರಿಯರಿಗೆ ಶಾಕಿಂಗ್‌ ನ್ಯೂಸ್‌; ರಾಜ್ಯದಲ್ಲಿ 3 ದಿನ ಮದ್ಯ ನಿಷೇಧ..!!

- Advertisement -G L Acharya panikkar
- Advertisement -

ರಾಜ್ಯ ವಿಧಾನಸಭಾ ಚುನಾವಣೆ ನಡೆಯುವ ಹಿನ್ನಲೆ ರಾಜ್ಯದಲ್ಲಿ ಶಾಂತಿ ಪಾಲನೆ, ಕಾನೂನು ಸುವ್ಯವಸ್ಥೆ ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಮದ್ಯ ಮಾರಾಟ ಹಾಗೂ ಸಾಗಾಟದ ಮೇಲೆ ನಿರ್ಬಂಧ ಹೇರಲಾಗಿದೆ.

ಮೇ 8ರ ಮಧ್ಯರಾತ್ರಿಯಿಂದ ಮೇ10 ರ ಮಧ್ಯರಾತ್ರಿಯವರೆಗೂ ಎಣ್ಣೆ ಸಿಗೋದಿಲ್ಲ. ಮೇ 10 ರಂದು ಮತದಾನ ನಡೆಯಲಿದೆ. ಹೀಗಾಗಿ ಒಂದು ದಿನ ಮುಂಚೆಯೇ ರಾಜ್ಯದಲ್ಲಿ ಎಣ್ಣೆಯನ್ನು ಬಂದ್ ಮಾಡಲಾಗುತ್ತೆ. ಇನ್ನು ಮೇ 13ರಂದು ಫಲಿತಾಂಶ ಇರೋ ಕಾರಣ ಮೇ 12ರ ಮಧ್ಯರಾತ್ರಿಯಿಂದ ಮೇ 13ರ ಮಧ್ಯರಾತ್ರಿಯವರೆಗೂ ಎಣ್ಣೆ ಸಿಗೋದಿಲ್ಲ.

ಮದ್ಯ ಮಾರಾಟ ಮಳಿಗೆ, ಬಾರ್ ಮತ್ತು ರೆಸ್ಟೋರೆಂಟ್, ಮದ್ಯ ತಯಾರಿಸುವ ಡಿಸ್ಟಲರಿ, ಸ್ಟಾರ್ ಹೊಟೇಲ್‌ಗಳು ಹಾಗೂ ಶೇಂದಿ ಅಂಗಡಿಗಳಿಗೂ ಈ ನಿರ್ಬಂಧ ಅನ್ವಯ ಆಗಲಿದೆ. ಕರ್ನಾಟಕ ಗಡಿ ಭಾಗದ ಮಹಾರಾಷ್ಟ್ರದ ಲಾತೂರ್ ಜಿಲ್ಲೆಯಲ್ಲಿ ಇರುವ ನಿಲಂಗಾ, ದೇವಾನಿ ಹಾಗೂ ಉದ್ಗಿರ್ ತಾಲ್ಲೂಕುಗಳಲ್ಲಿ ಮದ್ಯ ನಿಷೇಧ ನಿಯಮ ಅನ್ವಯ ಆಗಲಿದೆ.

ಕರ್ನಾಟಕದ ಗಡಿಯಿಂದ 5 ಕಿ. ಮೀ. ಅಂತರದಲ್ಲಿ ಅನ್ಯ ರಾಜ್ಯಗಳ ಗ್ರಾಮ, ನಗರ, ಪಟ್ಟಣಗಳಲ್ಲಿ ಮದ್ಯ ಮಾರಾಟ ಮಾಡುವಂತಿಲ್ಲ. ಒಂದು ವೇಳೆ ಈ ನಿಯಮ ಉಲ್ಲಂಘನೆ ಮಾಡಿದರೆ ಭಾರೀ ದಂಡ ತೆರಬೇಕಾಗುತ್ತೆ.

- Advertisement -

Related news

error: Content is protected !!