- Advertisement -
- Advertisement -
ವರದಿ: ನ್ಯೂಸ್ ಡೆಸ್ಕ್, ವಿ ಟಿವಿ
ಬೆಂಗಳೂರು: ಲಾಕ್ ಡೌನ್ ಎಂದು ಯಾರೂ ರೈಲ್ವೆ ಹಳಿಗಳ ಮೇಲೆ ಮಲಗಬೇಡಿ ಎಂದು ರೈಲ್ವೆ ಇಲಾಖೆ ಸೂಚನೆ ನೀಡಿದೆ. ನಾಳೆಯಿಂದ ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಗಳಲ್ಲಿ ಲಾಕ್ ಡೌನ್ ಜಾರಿಯಾಗಲಿವೆ. ಆದರೆ ಕೆಲ ರೈಲುಗಳು ಸಂಚಾರ ನಡೆಸಲಿವೆ.
ಹೀಗಾಗಿ ಯಾರೂ ರೈಲು ಹಳಿಗಳ ಮೇಲೆ ದಾಟುವುದಾಗಲಿ, ಮಲಗುವುದಾಗಲಿ ಅಥವಾ ಹಳಿಯ ಮೇಲೆ ಕುಳಿತುಕೊಳ್ಳುವ ಕೆಲಸ ಮಾಡದಿರಿ ಎಂದು ಎಚ್ಚರಿಕೆ ನೀಡಿದೆ. ಇದಲ್ಲದೇ, ರೈಲ್ವೆ ಗೇಟ್ ಗಳನ್ನು ಹಾದು ಹೋಗುವಾಗ ಮೊಬೈಲ್ ಫೋನ್ ಬಳಸದಂತೆ ಮನವಿ ಮಾಡಿದೆ.
ಈ ಹಿಂದೆ ದೇಶಾದ್ಯಂತ ಜಾರಿಯಾಗಿದ್ದ ಲಾಕ್ ಡೌನ್ ವೇಳೆ ಔರಂಗಬಾದ್ ಹಳಿ ಮೇಲೆ ವಲಸೆ ಕಾರ್ಮಿಕರು ಮಲಗಿದ್ದರು. ಈ ವೇಳೆ ರೈಲೊಂದು 15 ಮಂದಿ ಮೇಲೆ ಹರಿದುಹೋಗಿತ್ತು. ಈ ಹಿನ್ನಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ರೈಲ್ವೆ ಇಲಾಖೆ ಈ ಸೂಚನೆ ನೀಡಿದೆ.
- Advertisement -