ಇಂದು ಕರುನಾಡಿನ 14 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆವರೆಗೆ ಮತದಾನ ನಡೆಯಲಿದ್ದು, ಚುನಾವಣ ಆಯೋಗ ಮತದಾನಕ್ಕೆ ಎಲ್ಲಾ ಸಿದ್ಧತೆಯನ್ನ ಮಾಡಿಕೊಂಡಿದೆ.
ಬೆಂಗಳೂರಿನ ನಾಲ್ಕು ಕ್ಷೇತ್ರ ಮತ್ತು ಮಂಡ್ಯ, ಮೈಸೂರು, ತುಮಕೂರಿನಲ್ಲಿ ಮತದಾನ ನಡೆಯಲಿದೆ. ಹಾಸನ, ಚಿಕ್ಕಬಳ್ಳಾಪುರ, ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು, ಚಿತ್ರದುರ್ಗ ಹೀಗೆ ಒಟ್ಟು 14 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಕಾಂಗ್ರೆಸ್‌ನ 14, ಬಿಜೆಪಿಯ 11, ಜೆಡಿಎಸ್‌ನ ಮೂವರು ಸೇರಿದಂತೆ 247 ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಗೆ ಸೇರಲಿದೆ.
ಪ್ರಮುಖ ಪಕ್ಷಗಳ ಅಭ್ಯರ್ಥಿಗಳ ಪೈಕಿ 18 ಮಂದಿ ಇದೇ ಮೊದಲ ಬಾರಿಗೆ ಲೋಕಸಭೆ ಚುನಾವಣೆ ಎದುರಿಸುತ್ತಿದ್ದಾರೆ. 14 ಕ್ಷೇತ್ರಗಳಲ್ಲಿ ಒಟ್ಟು 247 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಇವರ ಭವಿಷ್ಯ ಮತದಾರರ ಕೈಯಲ್ಲಿದೆ. ಇಂದು ಮತದಾನ ನಡೆಯಲಿದ್ದು ಮತದಾರರು ಯಾರ ಪರ ತೀರ್ಪು ಬರೆಯಲಿದ್ದಾರೆ ಅನ್ನೋ ಕುತೂಹಲ ಜೂನ್ 4ರಂದು ಬಯಲಾಗಲಿದೆ.
ನಿನ್ನೆ ಬೆಳಗಿನಿಂದಲೇ 14 ಕ್ಷೇತ್ರಗಳಲ್ಲಿ ಮಸ್ಟರಿಂಗ್ ಮಾಡಿ ಇವಿಎಂ, ವಿವಿಪ್ಯಾಟ್, ಮತದಾರರ ಪಟ್ಟಿ, ಶಾಹಿ ಸೇರಿದಂತೆ ಚುನಾವಣೆ ಸಾಮಾಗ್ರಿ ರವಾನಿಸಲಾಗಿದೆ. ಇವುಗಳನ್ನ ಹೊತ್ತು ಚುನಾವಣೆ ಸಿಬ್ಬಂದಿ ಮತಗಟ್ಟೆ ಸೇರಿದ್ದಾರೆ.