Sunday, June 29, 2025
spot_imgspot_img
spot_imgspot_img

ಉಜ್ವಲ ಯೋಜನೆಯಡಿ ವರ್ಷದಲ್ಲಿ 12 ಸಿಲಿಂಡರ್‌ಗಳಿಗೆ ಸಬ್ಸಿಡಿ

- Advertisement -
- Advertisement -
vtv vitla

ಉಜ್ವಲ ಯೋಜನೆಯ ಫಲಾನುಭವಿಗಳಿಗೆ ವರ್ಷದಲ್ಲಿ 12 ಸಿಲಿಂಡರ್‌ಗಳಿಗೆ ಪ್ರತಿ ರೀಫಿಲ್‌ಗಳಿಗೆ 200 ರೂ. ಸಬ್ಸಿಡಿ ನೀಡಲು ಕೇಂದ್ರ ಸಂಪುಟ ಅನುಮೋದನೆ ನೀಡಿದೆ.

ಮಾರ್ಚ್ 1, 2023 ರವರೆಗೆ ಈ ಯೋಜನೆಯ 9.59 ಕೋಟಿ ಫಲಾನುಭವಿಗಳಿದ್ದಾರೆ. 2022-23ರ ಹಣಕಾಸು ವರ್ಷದಲ್ಲಿ ಒಟ್ಟು ವೆಚ್ಚ 6,100 ಕೋಟಿ ರೂ. ಮತ್ತು 2023-24ಕ್ಕೆ 7,680 ಕೋಟಿ ರೂ ವೆಚ್ಚವಾಗಿದೆ. ಸಹಾಯಧನವನ್ನು ಅರ್ಹ ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತದೆ.

ಪ್ರಧಾನ ಮಂತ್ರಿ ಉಜ್ವಲ ಯೋಜನೆಯ (ಪಿಎಂಯುವೈ) ಫಲಾನುಭವಿಗಳಿಗೆ ಕೇಂದ್ರ ಸಚಿವ ಸಂಪುಟವು ಶುಕ್ರವಾರ 14.2 ಕೆಜಿ ಸಿಲಿಂಡರ್‌ಗೆ ವರ್ಷಕ್ಕೆ 12 ರೀಫಿಲ್‌ಗಳಿಗೆ ತಲಾ 200 ರೂ. ಸಬ್ಸಿಡಿಗೆ ಅನುಮೋದನೆ ನೀಡಿದೆ.

ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ರವರು ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್ ಸಮಿತಿಯ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರದ ಬಗ್ಗೆ ಮಾಹಿತಿ ಮಾಹಿತಿ ನೀಡಿದರು.

- Advertisement -

Related news

error: Content is protected !!