Monday, July 20, 2026
spot_imgspot_img
spot_imgspot_img

ಲಕ್ನೋ: ನಿರಂತರ ಆನ್‌ಲೈನ್ ಗೇಮಿಂಗ್ ಅಪಾಯ: ಪಬ್‌ಜಿ ಆಡುತ್ತಲೇ ಯುವಕ ಸಾವು!

- Advertisement -
- Advertisement -

ಲಕ್ನೋ: ಕೊರಿಯನ್ ಲವ್ ಗೇಮ್‌ಗೆ ಗಾಜಿಯಾಬಾದ್‌ನ ಮೂವರು ಸಹೋದರಿಯರು ಬಲಿಯಾಗಿರುವ ಘಟನೆ ಇನ್ನೂ ಚರ್ಚೆಯಲ್ಲಿರುವಾಗಲೇ, ಉತ್ತರ ಪ್ರದೇಶದಲ್ಲಿ ಮತ್ತೊಂದು ದುರ್ಘಟನೆ ನಡೆದಿದೆ. ಪಬ್‌ಜಿ ಗೇಮ್ ಆಡುತ್ತಿದ್ದ ವೇಳೆ ರಕ್ತದೊತ್ತಡ ತೀವ್ರವಾಗಿ ಹೆಚ್ಚಾಗಿ ಯುವಕನೊಬ್ಬ ಸಾವನ್ನಪ್ಪಿರುವ ಘಟನೆ ಮೀರತ್‌ನಲ್ಲಿ ವರದಿಯಾಗಿದೆ.

ಮೃತ ಯುವಕನನ್ನು ಮೊಹಮ್ಮದ್ ಕೈಫ್ (22) ಎಂದು ಗುರುತಿಸಲಾಗಿದೆ. ಖೈರ್‌ನಗರದ ಗುಲಾರ್ ವಾಲಿ ಗಾಲಿಯ ನಿವಾಸಿಯಾಗಿರುವ ಪ್ರಾಪರ್ಟಿ ಡೀಲರ್ ಫಾರುಕ್ ಅವರ ಏಕೈಕ ಪುತ್ರನಾಗಿದ್ದ ಕೈಫ್, ಕಳೆದ ನಾಲ್ಕು ತಿಂಗಳಿಂದ ಆನ್‌ಲೈನ್ ಗೇಮಿಂಗ್‌ಗೆ ಅತಿಯಾಗಿ ಅಡಿಕ್ಟ್ ಆಗಿದ್ದನು. ಶುಕ್ರವಾರ ರಾತ್ರಿ ತಡ ರಾತ್ರಿವರೆಗೆ ಪಬ್‌ಜಿ ಆಡುತ್ತಿದ್ದ ಕೈಫ್, ತಡರಾತ್ರಿ ಸುಮಾರು 3 ಗಂಟೆಯ ವೇಳೆಗೆ ಗೇಮ್ ಆಡುತ್ತಲೇ ಕುಸಿದು ಬಿದ್ದಿದ್ದಾನೆ.

ಶಬ್ದ ಕೇಳಿ ಕೋಣೆಗೆ ಓಡಿಬಂದ ಮನೆಯವರು ಕೈಫ್ ಪ್ರಜ್ಞಾಹೀನ ಸ್ಥಿತಿಯಲ್ಲಿ ಇರುವುದನ್ನು ಗಮನಿಸಿ ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದಾರೆ. ವೈದ್ಯಕೀಯ ಪರೀಕ್ಷೆಯಲ್ಲಿ ಅವನ ರಕ್ತದೊತ್ತಡ 300ಕ್ಕೂ ಅಧಿಕವಾಗಿರುವುದು ಕಂಡುಬಂದಿದೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ದೆಹಲಿಯ ಆಸ್ಪತ್ರೆಗೆ ರವಾನಿಸಲಾಗಿತ್ತು. ಅಲ್ಲಿ ಎರಡು ದಿನಗಳ ಕಾಲ ಜೀವನ್ಮರಣ ಹೋರಾಟ ನಡೆಸಿದ ಕೈಫ್ ಭಾನುವಾರ ಕೊನೆಯುಸಿರೆಳೆದಿದ್ದಾನೆ.

ತೀವ್ರ ಮಾನಸಿಕ ಒತ್ತಡ, ನಿದ್ರಾಹೀನತೆ ಮತ್ತು ನಿರಂತರ ಗೇಮಿಂಗ್ ಕಾರಣವಾಗಿ ರಕ್ತದೊತ್ತಡ ಹೆಚ್ಚಾಗಿ ಮೆದುಳಿನಲ್ಲಿ ರಕ್ತಸ್ರಾವ ಉಂಟಾಗಿ ಸಾವಿಗೆ ಕಾರಣವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

- Advertisement -

Related news

error: Content is protected !!