Monday, April 29, 2024
spot_imgspot_img
spot_imgspot_img

ಇಂದು ವರ್ಷದ ಕೊನೆಯ ಚಂದ್ರಗ್ರಹಣ; ಆರಂಭ, ಅಂತ್ಯ ಯಾವಾಗ.?

- Advertisement -G L Acharya panikkar
- Advertisement -
vtv vitla

ಈ ವರ್ಷದ ಕೊನೆಯ ಗ್ರಹಣವಾಗಿರುವ ಚಂದ್ರಗ್ರಹಣ ಇಂದು ಸಂಭವಿಸಲಿದೆ. ಅ. 28 -29ರ ಮಧ್ಯರಾತ್ರಿ ಈ ಗ್ರಹಣದ ಗೋಚರ ಆಗಲಿದೆ. ಅಕ್ಟೋಬರ್ 28 ರಂದು ಮಧ್ಯಾಹ್ನ 2:52ಕ್ಕೆ ಸೂತಕ ಸಮಯ ಆರಂಭವಾಗುತ್ತದೆ. ಅಕ್ಟೋಬರ್ 29ರಂದು ಬೆಳಿಗ್ಗೆ 2:22ರವರೆ ಸೂತಕ ಸಮಯ ಕೊನೆಗೊಳ್ಳುತ್ತದೆ.

ಭಾರತದಲ್ಲಿ ನಾಳೆ ರಾತ್ರಿ 11.31ಕ್ಕೆ ಆರಂಭವಾಗಲಿರುವ ಈ ಭಾಗಶಃ ಚಂದ್ರಗ್ರಹಣ, ಬೆಳಗ್ಗಿನ ಜಾವ 3.36 ಹಾಗೆ ಕೊನೆಯಾಗಲಿದೆ. ರಾತ್ರಿ 11.31ರ ಹಾಗೆ ಗ್ರಹಣ ಆರಂಭವಾದರೂ ಅದರ ಸಂಪೂರ್ಣ ಛಾಯೆ ಮಧ್ಯರಾತ್ರಿ ಬಳಿಕವೇ ಅಂದರೆ ರಾತ್ರಿ 1.05ರ ಹಾಗೆ ಸಂಪೂರ್ಣವಾಗಿ ಆವರಿಸಿಕೊಳ್ಳಲಿದ್ದು, ಅದು ಅ. 29ರ ರಾತ್ರಿ 2.24ರವರೆಗೂ ಇರಲಿದೆ. ಹೀಗಾಗಿ ಗ್ರಹಣದ ಈ ಅವಧಿ ಸುಮಾರು 1.19 ನಿಮಿಷ ಇರಲಿದೆ. ಇಂದಿನ ಭಾಗಶಃ ಚಂದ್ರಗ್ರಹಣ ದೇಶಾದ್ಯಂತ ಗೋಚರಿಸಲಿದೆ.

ಚಂದ್ರಗ್ರಹಣ ಹುಣ್ಣಿಮೆಯ ದಿನ ಸಂಭವಿಸುತ್ತದೆ. ಭೂಮಿಯು ಚಂದ್ರ ಮತ್ತು ಸೂರ್ಯನ ನಡುವೆ ನಿಖರವಾಗಿ ಸ್ಥಾನ ಪಡೆದಾಗ ಭೂಮಿಯ ನೆರಳು ಚಂದ್ರನ ಮೇಲ್ಮೈ ಮೇಲೆ ಬೀಳುತ್ತದೆ. ಆಗ ಚಂದ್ರ ಕೆಲ ಸಮಯ ಮರೆಯಾಗಿರುತ್ತದೆ. ಚಂದ್ರನ ಮೇಲ್ಮೈ ಕೆಂಪು ಬಣ್ಣಕ್ಕೆ ತಿರುಗುತ್ತದೆ. ಅಂದರೆ ಭೂಮಿ ಸೂರ್ಯ ಮತ್ತು ಚಂದ್ರನ ನಡುವೆ ಬಂದಾಗ ಗೋಲ್ಡನ್ ರಿಂಗ್ ನಂತೆ ಚಂದ್ರ ಕಾಣಿಸುತ್ತದೆ.

ಭಾರತ, ಬೆಲ್ಜಿಯಂ, ಗ್ರೀಸ್‌, ಫಿನ್‌ಲ್ಯಾಂಡ್‌, ಪೋರ್ಚುಗಲ್‌, ಥೈಲ್ಯಾಂಡ್‌, ಹಂಗೇರಿ, ಈಜಿಪ್ಟ್‌, ಟರ್ಕಿ, ಇಂಡೋನೇಷ್ಯಾ, ಇಟಲಿ, ಮಯನ್ಮಾರ್‌, ಸ್ಪೇನ್‌ ಸೇರಿ ಹಲವು ದೇಶಗಳಲ್ಲಿ ಚಂದ್ರ ಗ್ರಹಣ ಗೋಚರಿಸಲಿದೆ.

ಯಾವ ರಾಶಿಗಳಿಗೆ ಯಾವ ಫಲ?
ಶುಭ ಫಲ: ಮಿಥುನ, ಕರ್ಕಾಟಕ, ವೃಶ್ಚಿಕ, ಕುಂಭ
ಮಿಶ್ರ ಫಲ: ಸಿಂಹ, ತುಲಾ, ಧನು, ಮೀನ
ಅಶುಭ ಫಲ: ಮೇಷ, ವೃಷಭ, ಕನ್ಯಾ, ಮಕರ

ಚಂದ್ರಗ್ರಹಣದಂದು ಭೋಜನದ ವಿಚಾರಕ್ಕೆ ಸಂಬಂಧಿಸಿದಂತೆ ಅಶಕ್ತರಿಗೆ, ವಯೋವೃದ್ಧರಿಗೆ ಮತ್ತು ರೋಗಿಗಳಿಗೆ ಯಾವುದೇ ನಿರ್ಬಂಧ ಇರುವುದಿಲ್ಲ. ರಾತ್ರಿ 01.44 ರಿಂದ 02.44 ಒಳಗೆ ತರ್ಪಣ ಬಿಡಬೇಕು. ಪೂರ್ಣಿಮಾ ಶ್ರಾದ್ಧವನ್ನು 28ರ ಶನಿವಾರದಂದು ಆಚರಿಸಬೇಕು. ಮುಖ್ಯವಾಗಿ ಅಶ್ವಿನಿ ನಕ್ಷತ್ರದವರು ಮತ್ತು ಮೇಷ ರಾಶಿಯವರು ಗ್ರಹಣ ಶಾಂತಿಯನ್ನು ಮಾಡಬೇಕು. ವೃಷಭ, ಸಿಂಹ, ಕನ್ಯಾ, ಮೀನ ರಾಶಿಯವರು ಕೂಡಾ ಚಂದ್ರಗ್ರಹಣ ಶಾಂತಿಯನ್ನು ಮಾಡಬೇಕಾಗುತ್ತದೆ.

ಇದು ವರ್ಷದ ಕೊನೆಯ ಗ್ರಹಣವಾಗಿದ್ದು, ಇದಾದ ಬಳಿಕ ದೇಶದಲ್ಲಿ 2025ರ ಸೆ.7ರಂದು ಖಗ್ರಾಸ ಚಂದ್ರಗ್ರಹಣ ಸಂಭವಿಸಲಿದೆ. ಕಳೆದ ಬಾರಿ ನ.8, 2022ರಂದು ಚಂದ್ರಗ್ರಹಣ ಸಂಭವಿಸಿತ್ತು. ಇಡೀ ದೇಶದಲ್ಲಿ ಚಂದ್ರಗ್ರಹಣ ಕಾಣಲಿದ್ದು, ಇದರ ಜೊತೆಗೆ ಏಷ್ಯಾ ಖಂಡ ಸೇರಿ ಎಲ್ಲ ಕಡೆಗಳಲ್ಲಿಯೂ ವೀಕ್ಷಿಸಬಹುದಾಗಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

- Advertisement -

Related news

error: Content is protected !!