Tuesday, July 1, 2025
spot_imgspot_img
spot_imgspot_img

ಮಾಣಿ: (ಮೇ.17) ಬಂಟ್ವಾಳ ಜಮೀಯ್ಯತುಲ್ ಫಲಾಹ್, ರೋಟರಿ ಕ್ಲಬ್ ನಿಂದ “ಮೆಹ್’ಫಿಲೇ ಈದ್” ಝಕರಿಯಾ ಜೋಕಟ್ಟೆ, ಡಾ. ಮೋಹನ್ ಆಳ್ವ, ರೋಹನ್ ಮೊಂತೇರೋ ಅವರಿಗೆ ಈದ್ ಅವಾರ್ಡ್

- Advertisement -
- Advertisement -

ಜಮೀಯ್ಯತುಲ್ ಫಲಾಹ್ ಬಂಟ್ವಾಳ ಘಟಕ, ರೋಟರಿ ಕ್ಲಬ್ ಬಂಟ್ವಾಳ, ಉಪ್ಪಿನಂಗಡಿ, ಬಂಟ್ವಾಳ ಟೌನ್ ಹಾಗೂ ವಿಟ್ಲ ಘಟಕದ ಸಹಯೋಗದಲ್ಲಿ ಮೆಹ್’ಫಿಲೇ ಈದ್ ಕಾರ್ಯಕ್ರಮವು ಮೇ 17 ಶುಕ್ರವಾರ ಸಂಜೆ 05.30ಕ್ಕೆ ಮಾಣಿ ಜನಪ್ರಿಯ ಗಾರ್ಡನ್ ನಲ್ಲಿ ನಡೆಯಲಿದೆ.

ಎನ್ನಾರೈ ಉದ್ಯಮಿ, ಸಂಘಟಕ ಝಕರಿಯಾ ಜೋಕಟ್ಟೆ ಅಲ್ ಮುಝೈನ್, ಶಿಕ್ಷಣ ಹರಿಕಾರ, ಸಾಂಸ್ಕೃತಿಕ ಸಂಘಟಕ ಡಾ. ಎಂ. ಮೋಹನ್ ಆಳ್ವ, ಮಂಗಳೂರು ಉದ್ಯಮಿ, ಸೇವಾಕರ್ತೃ ರೋಹನ್ ಮೊಂತೇರೋ ಅವರಿಗೆ ಈದ್ ಅವಾರ್ಡ್ ನೀಡಿ ಗೌರವಿಸಲಾಗುವುದು. ಜಮೀಯ್ಯತುಲ್ ಫಲಾಹ್ ಅಧ್ಯಕ್ಷ ರಶೀದ್ ವಿಟ್ಲ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭದಲ್ಲಿ ಮಂಜೇಶ್ವರ ಶಾಸಕ ಎ.ಕೆ.ಎಂ. ಅಶ್ರಫ್ ಈದ್ ಸಂದೇಶ ನೀಡುವರು. ರೋಟರಿ ಜಿಲ್ಲಾ ನಿಯೋಜಿತ ಗವರ್ನರ್ ವಿಕ್ರಮ್ ದತ್ತ ಪ್ರಶಸ್ತಿ ವಿತರಿಸುವರು. ಸುಲ್ತಾನ್ ಗೋಲ್ಡ್ ಎಂ.ಡಿ. ಡಾ. ಅಬ್ದುಲ್ ರವೂಫ್, ಜನಪ್ರಿಯ ಗ್ರೂಪ್ಸ್ ಎಂ.ಡಿ. ಡಾ. ಅಬ್ದುಲ್ ಬಶೀರ್ ವಿ.ಕೆ., ಜಮೀಯ್ಯತುಲ್ ಫಲಾಹ್ ಜಿಲ್ಲಾಧ್ಯಕ್ಷ ಕೆ.ಕೆ. ಶಾಹುಲ್ ಹಮೀದ್ ಹಾಗೂ ಡ್ರೀಮ್ ಎಸೋಸಿಯೇಟ್ಸ್ ಎಂ.ಡಿ. ಝುಬೈರ್ ಬುಳೇರಿಕಟ್ಟೆ ಮುಖ್ಯ ಅತಿಥಿಯಾಗಿ ಭಾಗವಹಿಸುವರು.

ಕಾರ್ಯಕ್ರಮದಲ್ಲಿ ಇಬ್ರಾಹಿಂ ಬಾತಿಷ ತಂಡದ ಗಾಯನ, ಕೇರಳ ಕಣ್ಣೂರು ಕಲಾ ವೇದಿ ತಂಡದ ದಫ್, ಕೋಲ್ಕಳಿ, ಮುಟ್ಟ್, ಸೂಫಿ, ಅರಬಿಕ್ ನೃತ್ಯಗಳ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ಅಲ್ ಮುಝೈನ್ ಜುಬೈಲ್, ಸುಲ್ತಾನ್ ಡೈಮಂಡ್ಸ್ ಮತ್ತು ಗೋಲ್ಡ್, ಡ್ರೀಮ್ ಎಸೋಸಿಯೇಟ್ಸ್, ಜನಪ್ರಿಯ ಗಾರ್ಡನ್ಸ್, ರಿಫಾಯಿ ಟ್ರೇಡಿಂಗ್ ಕಂಪೆನಿ ಹಾಗೂ ಆನಿಯಾ ದರ್ಬಾರ್ ಗ್ರೂಪ್ ಆಫ್ ಹೋಟೆಲ್ಸ್ ಸಹಕಾರ ನೀಡಲಿದೆ.

- Advertisement -

Related news

error: Content is protected !!