Monday, July 1, 2024
spot_imgspot_img
spot_imgspot_img

ಮಾಣಿ: ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿಯ ವೇಳೆ ಅಪಾಯದಲ್ಲಿ ಸಿಲುಕಿದ ಮನೆಯ ಪರಿಶೀಲಿಸಿದ ಜಿಲ್ಲಾಧಿಕಾರಿ

- Advertisement -G L Acharya panikkar
- Advertisement -

ಮಾಣಿ: ಇಲ್ಲಿನ ಹಳೀರ ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿಗೆ ಅವೈಜ್ಞಾನಿಕ ರೀತಿಯಲ್ಲಿ ಮಣ್ಣು ತೆಗೆದು ತಡೆಗೋಡೆ ನಿರ್ಮಿಸದ ಕಾರಣದಿಂದ ಹೆದ್ದಾರಿ ಬದಿ ಎತ್ತರದಲ್ಲಿದ್ದ ಖತೀಜಮ್ಮ,ಮತ್ತು ದಿವಂಗತ ಡ್ರೈವರ್ ಉಮ್ಮರ್ ಎಂಬವರ ಮನೆಯು ಕುಸಿದು ಬೀಳುವ ಹಂತದಲ್ಲಿದ್ದು ಶುಕ್ರವಾರ ಮಧ್ಯಾಹ್ನ ವೇಳೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಭೇಟಿ ನೀಡಿ ಪರಿಶೀಲಿಸಿದರು ಮತ್ತು ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಿ ಬೇಕಾದ ವ್ಯವಸ್ಥೆ ಮಾಡಿಕೊಡುವ ಬಗ್ಗೆ ಭರವಸೆ ನೀಡಿದರು.

ಬಂಟ್ವಾಳ ತಾಲೂಕಿನ ಮಾಣಿ ಗ್ರಾಮದ ಹಳೀರ ಎಂಬಲ್ಲಿ ಖತೀಜಮ್ಮ ಮತ್ತು ದಿವಂಗತ ಪಟ್ಲ ಅಬೂಬಕರ್ ಕುಟುಂಬವು ಸುಮಾರು ನಲ್ವತ್ತು ವರ್ಷಗಳಿಂದ ವಾಸವಿದ್ದು ಎಂಟು ವರ್ಷಗಳ ಹಿಂದೆ ಹಳೆ ಮನೆ ರಿಪೇರಿ ಮಾಡಿಸಿ ಕಾಂಕ್ರೀಟ್ ಟೆರೇಸ್ ಮಾಡಿದ್ದರು,ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ನಿರ್ಮಾಣಕ್ಕೆ ಗುತ್ತಿಗೆದಾರರು ಸ್ವಾಧೀನ ಪಡಿಸಿಕೊಂಡ ಜಾಗಕ್ಕಿಂತ ಹೆಚ್ಚು ಜಾಗದಿಂದ ಮಣ್ಣು ತೆಗೆದು ಮನೆ ಬೀಳುವಂತೆ ಮಾಡಿದ್ದು ತಡೆಗೋಡೆ ಕೂಡಾ ನಿರ್ಮಿಸದೆ ಸತಾಯಿಸುತ್ತಿರುವ ಬಗ್ಗೆ ಮನೆಯವರು ಜಿಲ್ಲಾಧಿಕಾರಿ ಯವರಲ್ಲಿ ದೂರು ನೀಡಿದರು, ಮತ್ತು ಈ ಪ್ರದೇಶದಲ್ಲಿ ಹಲವಾರು ಮನೆಗಳ ದಾರಿಗಳನ್ನು ಕೆಡವಲಾಗಿದೆ ನಿಯಮದಂತೆ ಹೊಸ ದಾರಿ ಮಾಡಿಕೊಡಬೇಕಾಗಿದ್ದು ಅದನ್ನೂ ಮಾಡದೆ ಗುತ್ತಿಗೆದಾರರು ಶಾಲೆಗೆ ಹೋಗುವ ವಿದ್ಯಾರ್ಥಿಗಳಿಗೆ ರೋಗಿಗಳಿಗೆ ತೊಂದರೆ ಮಾಡುತ್ತಿದ್ದಾರೆ ಯಾರೂ ಕೇಳುವವರು ಇಲ್ಲದ ಪರಿಸ್ಥಿತಿ ಇದೆ ವಟ್ರಾಸಿ ಕೆಲಸ ಮಾಡಿಕೊಂಡು ಹೋಗುತ್ತಿದ್ದಾರೆ ಎಂಬ ಬಗ್ಗೆ ಜಿಲ್ಲಾಧಿಕಾರಿಯವರ ಗಮನಕ್ಕೆ ತರಲಾಯಿತು.

ಈ ಸಂದರ್ಭದಲ್ಲಿ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ ಮಾಣಿ, ಗ್ರಾಮ ಪಂಚಾಯತ್ ಮಾಣಿ ಸದಸ್ಯರುಗಳಾದ ಬಾಲಕೃಷ್ಣ ಆಳ್ವ, ಮೆಲ್ವಿನ್ ಕಿಶೋರ್ ಮಾರ್ಟಿಸ್, ಪಂಚಾಯತ್ ಅಧಿಕಾರಿಗಳು, ಸ್ಥಳೀಯರಾದ ಗಣೇಶ್ ರೈ ಮಾಣಿ, ಉಮೇಶ್ ಶೆಟ್ಟಿ ಮಾಣಿ, ಸಾಮಾಜಿಕ ಮುಂದಾಳು ಅಝೀಝ್ ಮಾಣಿ, ಹವ್ಯಾಸಿ ಪತ್ರಕರ್ತ ಸಲೀಂ ಮಾಣಿ, ಬಶೀರ್ ಮಾಣಿ, ಅಶ್ರಫ್, ಮಜೀದ್, ಕರೀಂ, ಅಮೀರ್, ಇಬ್ರಾಹಿಂ, ಸಿದ್ದೀಕ್ ಹಳೀರ, ಮುಹಮ್ಮದ್ ಹನೀಫ್ ಪಂತಡ್ಕ, ಮೊದಲಾದವರು ಉಪಸ್ಥಿತರಿದ್ದರು.

- Advertisement -

Related news

error: Content is protected !!