ವಿಟ್ಲ: ಅನೇಕ ವರ್ಷಗಳ ಸತತ ಹೋರಾಟ, ತ್ಯಾಗ, ಬಲಿದಾನದ ಫಲವಾಗಿ ಇಂದು ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮ ಚಂದ್ರನ ಭವ್ಯ ಮಂದಿರದ ನಿರ್ಮಾಣ ಕಾರ್ಯಕ್ಕೆ ಭೂಮಿ ಪೂಜನಾ ಕಾರ್ಯ ನಡೆಯಿತು ಎಂದು ಮಾತೃಭೂಮಿ ಯುವ ವೇದಿಕೆಯ ಅಧ್ಯಕ್ಷರಾದ ಸುದೇಶ್ ಮಾಣಿಲ ಹೇಳಿದರು.
ಅವರು ಮಾತೃಭೂಮಿ ಯುವ ವೇದಿಕೆ ಮಾಣಿಲ ಹಮ್ಮಿಕೊಂಡಿದ್ದ ಅಯೋಧ್ಯಾ ಭೂಮಿ ಪೂಜನಾ ದಿನ, ರಕ್ಷಾ ಬಂಧನ ಹಾಗೂ ಸನ್ಮಾನ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು.
ಅಯೋಧ್ಯೆಯಲ್ಲಿ ಮರ್ಯಾದಾ ಪುರುಷೋತ್ತಮ ಶ್ರೀರಾಮ ಚಂದ್ರನ ಮಂದಿರ ನಿರ್ಮಾಣ ಕಾರ್ಯಕ್ಕೆ ಶಿಲಾನ್ಯಾಸ ನೇರವೇರುವ ಮೂಲಕ ಹಿಂದೂ ಸಮಾಜದ ಹಲವು ವರ್ಷಗಳ ಕನಸು ಇಂದು ನನಸಾಗುವ ಕಾಲ ಸನ್ನಿಹಿತವಾಗಿದೆ ಎಂದು ಅವರು ಹೇಳಿದರು.
ಇದೇ ಸಂದರ್ಭದಲ್ಲಿ ಅಯೋಧ್ಯಾ ಅಯೋಧ್ಯಾ ಶ್ರೀರಾಮ ಮಂದಿರದ ಕರಸೇವಕರು, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಕಾರ್ಯಕರ್ತ ವೆಂಕಪ್ಪ ನಾಯ್ಕ ಕೊಮ್ಮುಂಜೆ ಅವರನ್ನು ಸನ್ಮಾನಿಸಲಾಯಿತು. ಅಲ್ಲದೇ ರಕ್ಷಾ ಬಂಧನ ಕಾರ್ಯವನ್ನು ಕೊರೊನ ಹಿನ್ನೆಲೆಯಲ್ಲಿ ಸಾಂಕೇತಿಕವಾಗಿ ಆಚರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಇತ್ತೀಚೆಗೆ ನಿಧನರಾದ ಅಯೋಧ್ಯಾ ಶ್ರೀರಾಮ ಮಂದಿರದ ಕರಸೇವಕರೂ, ರಾ.ಸ್ವ.ಸೇ. ಸಂಘದ ಹಿರಿಯ ಕಾರ್ಯಕರ್ತರೂ ಆಗಿರುವ ರಾಧಾಕೃಷ್ಣ ಭಟ್ ಮುಜೂರು ಅವರಿಗೆ ಶ್ರದ್ಧಾಂಜಲಿಯನ್ನು ಸಲ್ಲಿಸಲಾಯಿತು. ಶ್ರದ್ಧಾಂಜಲಿ ಸಭೆಯನ್ನು ಪೆರುವಾಯಿ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಗೀತಾನಂದ ಶೆಟ್ಟಿ ಮಾಣಿಲಗುತ್ತು ನಡೆಸಿಕೊಟ್ಟರು.
ರಾ. ಸ್ವ. ಸೇ. ಸಂಘದ ಹಿರಿಯ ಕಾರ್ಯಕರ್ತ ಅಪ್ಪಯ್ಯ ನಾಯಕ್ ಕೊಂಕೋಡು ಅಧ್ಯಕ್ಷ ವಹಿಸಿದ್ದರು.
ಸುನಿ ಮಾಣಿಲ ಪ್ರಾಸ್ತಾವಿಕ ಮಾತುಗಳನ್ನಾಡಿದರು. ರಂಜಿತ್ ಕುಮಾರ್ ದಂಡೆಪ್ಪಾಡಿ ಸಂಮ್ಮಾನ ಪತ್ರ ವಾಚಿಸಿದರು. ಪ್ರತೀಕ್ಷಾ ನಾಯಕ್ ಪ್ರಾರ್ಥಿಸಿ, ಯಶಸ್ ಹೆಗ್ಡೆ ಮುಂಡಮೂಲೆ ಸ್ವಾಗತಿಸಿದರು. ಮಿಥುನ್ ಕುಮಾರ್ ಕೊಂಕೋಡು ವಂದಿಸಿ, ಜಯರಾಜ್ ದಂಡೆಪ್ಪಾಡಿ ಕಾರ್ಯಕ್ರಮ ನಿರೂಪಿಸಿದರು.