Tuesday, April 20, 2021
spot_imgspot_img
spot_imgspot_img

ವಿಟ್ಲ: ಮಹಮ್ಮಾಯಿ ಅಮ್ಮನವರ ದೈವಸ್ಥಾನದ ಮತ್ತು ಸ-ಪರಿವಾರ ದೈವಗಳ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಹಾಗೂ ವಾರ್ಷಿಕ ಮಾರಿ ಪೂಜೆಯ ಆಮಂತ್ರಣ ಪತ್ರಿಕೆ ಬಿಡುಗಡೆ

ವಿಟ್ಲ: ಏಪ್ರಿಲ್ 28 ಮತ್ತು 29 ರಂದು ನಡೆಯಲಿರುವ ವಿಟ್ಲದ ಮೇಗಿನಪೇಟೆ ಮಹಮ್ಮಾಯಿ ಅಮ್ಮನವರ ದೈವಸ್ಥಾನದ ಮತ್ತು ಸ-ಪರಿವಾರ ದೈವಗಳ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಹಾಗೂ ವಾರ್ಷಿಕ ಮಾರಿ ಪೂಜೆಯ ಆಮಂತ್ರಣ ಪತ್ರಿಕೆಯನ್ನು ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಬಿಡುಗಡೆಗೊಳಿಸಲಾಯಿತು.

ಮಾಣಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಅವರು ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು. ಉದ್ಯಮಿ ಸತೀಶ್ ಕುಮಾರ್ ಆಳ್ವ ಇರಾಬಾಳಿಕೆ ಬ್ರಹ್ಮಕಲಶೋತ್ಸವದ ಲಕ್ಕಿಡಿಪ್ ಬಿಡುಗಡೆಗೊಳಿಸಿದರು.

ಗೌರವಾಧ್ಯಕ್ಷ ಕೃಷ್ಣಯ್ಯ ಕೆ ವಿಟ್ಲ ಅರಮನೆ, ಶ್ರೀಕಂಠ ವಿಟ್ಲ ಅರಮನೆ, ಜಯರಾಮ ಬಳ್ಳಾಲ್ ವಿಟ್ಲ ಅರಮನೆ, ಅಧ್ಯಕ್ಷ ಗಣೇಶ ಆಳ್ವ ಕಲ್ಲಗದ್ದೆ, ಕಾರ್ಯಾಧ್ಯಕ್ಷ ಪದ್ಮನಾಭ ಗೌಡ ಚಂದಪ್ಪಾಡಿ, ಕೋಶಾಧಿಕಾರಿ ವಿ ರಾಮದಾಸ್ ಶೆಣೈ, ಕಾರ್ಯದರ್ಶಿ ರಾಜೇಶ್ ವಿಟ್ಲ, ಆಡಳಿತ ಮೊಕ್ತೇಸರ ವಿ ಶೀನ, ಜಗನ್ನಾಥ ಸಾಲ್ಯಾನ್, ಅರುಣ್ ಎಂ ವಿಟ್ಲ, ಭವಾನಿ ರೈ ಕೊಲ್ಯ, ಶ್ರೀನಿವಾಸ್ ಚಂದಳಿಕೆ, ಮೊದಲಾದವರು ಉಪಸ್ಥಿತರಿದ್ದರು.

- Advertisement -

MOST POPULAR

HOT NEWS

Related news

error: Content is protected !!