- Advertisement -
- Advertisement -
ವರದಿ: ನ್ಯೂಸ್ ಡೆಸ್ಕ್, ವಿ ಟಿವಿ
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಲಾಕ್ ಡೌನ್ ತೆರವಾಗಿದೆ. ಆದ್ರೆ ಬಿಎಂಟಿಸಿ ಹಾಗೂ ಮೆಜೆಸ್ಟಿಕ್ ಬಸ್ ನಿಲ್ದಾಣ ಪ್ರಯಾಣಿಕರಿಲ್ಲದೆ ಬಿಕೋ ಎನ್ನುತ್ತಿದೆ. ಇಂದಿನಿಂದ ಬಿಎಂಟಿಸಿ ಹಾಗೂ ಕೆಎಸ್ ಆರ್ ಟಿಸಿ ಬಸ್ ಸಂಚಾರ ಬೆಳಿಗ್ಗೆ 6 ಗಂಟೆಯಿಂದ ಆರಂಭವಾಗಿದೆ. ಆದ್ರೆ ಪ್ರಯಾಣಿಕರ ಕೊರತೆಯಿಂದ ಬಸ್ ನಿಲ್ದಾಣ ಖಾಲಿ ಖಾಲಿಯಾಗಿದೆ.
ಬೆಳಿಗ್ಗಿನ ಜಾವ ಏರ್ ಪೋರ್ಟ್ ರಸ್ತೆ ಕಡೆಗೆ ಹೋಗುವ ಬಸ್ ಗಳನ್ನು ಹೊರತುಪಡಿಸಿ ಬೇರೆ ಯಾವ ಬಸ್ ಗಳು ನಿಲ್ದಾಣಕ್ಕೆ ಬಂದಿರಲಿಲ್ಲ. ಹೀಗಾಗಿ ನಿಲ್ದಾಣ ಸಂಪೂರ್ಣ ಖಾಲಿಯಾಗಿತ್ತು. ಇನ್ನು ಕೆಲ ಪ್ರಯಾಣಿಕರು ಬಸ್ ಬಾರದ ಕಾರಣ ಆಟೋಗಳತ್ತ ಮುಖಮಾಡಿದ ಚಿತ್ರಣ ಕಂಡು ಬಂತು.
- Advertisement -