- Advertisement -
- Advertisement -




ಸರ್ಕಾರಿ ಅಧಿಕಾರಿಯೊಬ್ಬರು ಆ್ಯಸಿಡ್ ಕುಡಿದು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಗರದ ಪಬ್ಲಿಕ್ ಸ್ವಿಮ್ಮಿಂಗ್ ಪೂಲ್ ಬಳಿ ನಡೆದಿದೆ.
ಆತ್ಮಹತ್ಯೆಗೆ ಯತ್ನಿಸಿದ ಸಿಬ್ಬಂದಿರಾಯಚೂರಿನ ಉಪವಿಭಾಗ (ಎಸಿ) ಕಚೇರಿಯ ಅಧಿಕಾರಿ ವಸೀಮ್ (45) ಎಂದು ಗುರುತಿಸಲಾಗಿದೆ.
ಆ್ಯಸಿಡ್ ಕುಡಿದ ಅಧಿಕಾರಿಯನ್ನು ನೋಡಿದ ಅಲ್ಲಿದ್ದವರು ತಕ್ಷಣ ಅವರನ್ನು ನಗರದ ಸಂಕಲ್ಪ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆದರೆ ಇನ್ನು ಹೆಚ್ಚಿನ ಚಿಕಿತ್ಸೆ ಅವಶ್ಯಕತೆ ಇದ್ದಿದ್ದರಿಂದ ಅಧಿಕಾರಿಯನ್ನು ಹೈದರಾಬಾದ್ನಲ್ಲಿನ ಆಸ್ಪತ್ರೆಯೊಂದಕ್ಕೆ ಕರೆದುಕೊಂಡು ಹೋಗಿದ್ದು ಅಲ್ಲಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇನ್ನು ಅಧಿಕಾರಿ ಆ್ಯಸಿಡ್ ಏಕೆ ಸೇವನೆ ಮಾಡಿದರು ಎಂಬುದರ ಬಗ್ಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಆ್ಯಸಿಡ್ ಸೇವನೆಯಿಂದಾಗಿ ವಸೀಮ್ ತೀವ್ರವಾಗಿ ಅಸ್ವಸ್ಥಗೊಂಡಿದ್ದಾರೆ ಎಂದು ಅವರ ಕುಟುಂಬಸ್ಥರು ನ್ಯೂಸ್ಫಸ್ಟ್ಗೆ ಮಾಹಿತಿ ನೀಡಿದ್ದಾರೆ.
- Advertisement -