Tuesday, May 14, 2024
spot_imgspot_img
spot_imgspot_img

ಪುತ್ತೂರು: ಒಂದು ದಿನದ ಸಾಹಸ ಚಾರಣ – “ಪ್ಲಾಸ್ಟಿಕ್ ಮುಕ್ತ ಮಂದಾಲ್ ಪಟ್ಟಿ”

- Advertisement -G L Acharya panikkar
- Advertisement -

ಪುತ್ತೂರು: ದಿನಾಂಕ ೧೧/೬/೨೦೨೨ ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಟ್ಟಂಪಾಡಿಯ ರೇಂಜರ್ ಮತ್ತು ರೋವರ್ ಘಟಕ ಹಾಗೂ ಕರ್ನಾಟಕ ಅರಣ್ಯ ಇಲಾಖೆ,ಮಡಿಕೇರಿ ವನ್ಯಜೀವಿ ವಿಭಾಗ,ಪುಷ್ಪಗಿರಿ ವನ್ಯ ಜೀವಿ ವಲಯ ಸೋಮವಾರಪೇಟೆ ಇದರ ಸಂಯುಕ್ತ ಆಶ್ರಯದಲ್ಲಿ ದಿನಾಂಕ 11/6/2022 ನೇ ಶನಿವಾರದಂದು “ನಮ್ಮ ನಡೆ ಪ್ಲಾಸ್ಟಿಕ್ ಮುಕ್ತ ಮಂದಾಲ್ ಪಟ್ಟಿ ಕಡೆ” ಎಂಬ ಶೀರ್ಷಿಕೆಯಲ್ಲಿ ಒಂದು ದಿನದ ಸಾಹಸ ಚಾರಣ ಶಿಬಿರ ಜರಗಿತು.

ಪರಿಸರ ದಿನಾಚರಣೆಯ ಭಾಗವಾಗಿ ನಡೆದ ಈ ಕಾರ್ಯಕ್ರಮದ ಉದ್ಘಾಟಕರಾದ ACF .ಶ್ರೀನಿವಾಸ ನಾಯಕ್ ಅವರು ಪಶ್ಚಿಮ ಘಟ್ಟದ ಶೋಲ ಅರಣ್ಯಗಳಲ್ಲಿ ಕಂಡುಬರುವ ಹುಲ್ಲುಗಾವಲುಗಳು ಮಳೆ ನೀರನ್ನು ಇಂಗಿಸುವಲ್ಲಿ ಸಹಕಾರಿಯಾಗಿದೆ ,ಇದರಿಂದಾಗಿ ಕುಮಾರಧಾರೆಯಂತಹ ಹಲವು ನದಿಗಳಿಗೆ ಉಗಮ ಸ್ಥಾನವು ಇದಾಗಿದೆ ಎನ್ನುತ್ತಾ ಈ ಶೋಲಾ ಆರಣ್ಯ ಪ್ರದೇಶದ ಪ್ರಮುಖ್ಯತೆಯನ್ನು ತಿಳಿಸಿದರು.

ರೇಂಜ್ ಫಾರೆಸ್ಟ್ ಆಫಿಸರ್ ವಿಮಲ್ ಬಾಬು ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾನವನ ಚಟುವಟಿಕೆಗಳಿಂದ ಪರಿಸರ ನಾಶವಾಗುತ್ತಿದೆ. ಅದರಲ್ಲಿಯೂ ವಿದ್ಯಾವಂತರೆಂಸಿಕೊಂಡವರು ಇಂತಹ ಪರಿಸರ ಹಾನಿ ಚಟುವಟಿಕೆ ಗಳಲ್ಲಿ ತೊಡಗಿರುವುದು ದುರದೃಷ್ಟಕರ ಬೆಳವಣಿಗೆ , ಆತನ ಹವ್ಯಾಸಗಳಲ್ಲಿ ಬದಲಾವಣೆ ಅಗತ್ಯ ಎಂದರು.

ಡೆಪ್ಯುಟಿ ಫಾರೆಸ್ಟ್ ಆಫೀಸರ್ ಶಶಿ ಪಿ. ಟಿ. ಯವರು ಹಲವು ಕಡೆ ಭೂಕುಸಿತ ಕ್ಕೆ ಕಾರಣ ಮಾನವನ ಹಸ್ತಕ್ಷೇಪ “ನರಮಾನಿ ಪೋಯಿನಲ್ ಪಂತಿಲ ಕೊಡಿಪ್ಪಂದ್ ” ಎನ್ನುತ್ತ ಪರಿಸರ ನಾಶದ ಕುರಿತು ಮಾಹಿತಿ ನೀಡಿದರು. ಮಂದಾಲ್ ಪಟ್ಟಿ ಪ್ಲಾಸ್ಟಿಕ್ ಮುಕ್ತ ಮಾಡುವಲ್ಲಿ ತುಂಬಾ ಪ್ರಯತ್ನ ನಡೆಯುತ್ತಿದೆ ಎಂದರು.

ನಂತರ ರೇಂಜರ್ ಮತ್ತು ರೋವರ್ ವಿದ್ಯಾರ್ಥಿಗಳಿಂದ ಮಂದಾಲ್ಪಟ್ಟಿಯ ಸುತ್ತಲೂ ಶ್ರಮದಾನ ಮಾಡಿ ಪ್ಲಾಸ್ಟಿಕ್ ಮತ್ತು ಇತರ ತ್ಯಾಜ್ಯ ಗಳನ್ನು ಸಂಗ್ರಹಿಸಿ ಮಂದಾಲ್ಪಟ್ಟಿ ಪ್ಲಾಸ್ಟಿಕ್ ಮುಕ್ತ ಗೊಳಿಸಲು ತಮ್ಮ ಕೈ ಜೋಡಿಸಿದರು.ರೇಂಜರ್ ಸ್ಕೌಟ್ ಲೀಡರ್ ಮಂಜುಳಾದೇವಿ ಅವರು , ರೋವರ್ ಸ ಸ್ಕೌಟ್ಸ್ ಲೀಡರ್ ಡಾ.ಪೋಡಿಯರವರು ಮತ್ತು ಅರ್ಥಶಾಸ್ತ್ರ ಉಪನ್ಯಾಸಕ ತಿಮ್ಮಯ್ಯರವರು ಕಾರ್ಯಕ್ರಮಕ್ಕೇ ಶುಭ ಹಾರೈಸಿದರು.

ಈ ಕಾರ್ಯಕ್ರಮವನ್ನು ಸ್ಕೌಟ್ಸ್ ಮತ್ತು ರೋವರ್ ಪ್ರಾಥನೆಯಿಂದ ಆರಂಭಿಸಲಾಯಿತು. ರೇಂಜರ್ ದಿವ್ಯರವರು ಸ್ವಾಗತಿಸಿದರು , ರೇಂಜರ್ ಹರ್ಷಿತಾರವರು ಧನ್ಯವಾದ ಸಮರ್ಪಿಸಿದರು. ರೇಂಜರ್ ಮತ್ತು ರೋವರ್ ವಿದ್ಯಾರ್ಥಿಗಳು ,ಪುಷ್ಪಗಿರಿ ಅರಣ್ಯ ಇಲಾಖೆಯ ಅಧಿಕಾರಿಗಳು ಸಮ್ಮುಖದಲ್ಲಿ ಚಾರಣ ಶಿಬಿರ ಯಶಸ್ವಿಯಾಗಿ ಜರಗಿತು.

- Advertisement -

Related news

error: Content is protected !!