- Advertisement -
- Advertisement -
ಮಂಗಳೂರು: ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಹತ್ತು ಮಂದಿ ಪೊಲೀಸರಿಗೆ ಕೋವಿಡ್ -19 ಸೋಂಕು ಪಾಸಿಟಿವ್ ದೃಢವಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಮಾಹಿತಿ ನೀಡಿದರು.
ಹತ್ತು ಮಂದಿ ಪೊಲೀಸರಿಗೆ ಸೋಂಕು ದೃಢವಾಗಿದ್ದು, ಅವರಲ್ಲಿ ಇಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದವರು ಹೋಮ್ ಐಸೊಲೇಷನ್ ನಲ್ಲಿದ್ದಾರೆ ಎಂದರು.
ಅವರೆಲ್ಲರ ಆರೋಗ್ಯ ಸ್ಥಿರವಾಗಿದ್ದು, ಸಿಬ್ಬಂದಿಗೆ ಖುದ್ದು ಕರೆ ಮಾಡಿ ಆರೋಗ್ಯ ವಿಚಾರಿಸುತ್ತಿದ್ದೇನೆ ಎಂದು ಆಯುಕ್ತ ಎನ್.ಶಶಿಕುಮಾರ್ ಹೇಳಿದರು.
- Advertisement -