- Advertisement -
- Advertisement -
ಮಂಗಳೂರು: ಉದ್ಯಮಿಯೋರ್ವರು ಬಹುಮಹಡಿ ಕಟ್ಟಡದಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳೂರಿನ ಬೆಂದೂರ್‌ವೆಲ್ ನಡೆದಿದೆ.
ಯುವ ಉದ್ಯಮಿ ಮೋಹನ್ ಅಮೀನ್ (48) ಇಂದು ಬೆಳಗ್ಗೆ 9 ಗಂಟೆ ಸುಮಾರಿಗೆ ಅವರು ವಾಸವಿದ್ದ ಬೆಂದೂರು ವೆಲ್ ನಲ್ಲಿ ಅಟ್ಲಾಂಟಿಕ್ ಅಪಾರ್ಟೆಂಟಿನ 17ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಆತ್ಮಹತ್ಯೆಗೆ ಸ್ಪಷ್ಟ ಕಾರಣಗಳು ತಿಳಿದು ಬಂದಿಲ್ಲ.
ಗುರುಪುರ ಪರಾರಿ ಮೂಲದ ಮೋಹನ್ ಅವರು, ಮಂಗಳೂರು, ವಾಮಂಜೂರು ಭಾಗದಲ್ಲಿ ವ್ಯವಹಾರ ಹೊಂದಿದ್ದರು. ಸಾವಿಗೂ ಮುನ್ನ ಡೆತ್ ನೋಟ್ ಬರೆದಿಟ್ಟಿದ್ದು ಅದರಲ್ಲಿ ನನ್ನ ಸಾವಿಗೆ ನಾನೇ ಕಾರಣ. ಪತ್ನಿ, ಮಕ್ಕಳಿಗೆ ಸಾರಿ ಎಂದಷ್ಟೇ ಬರೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕದ್ರಿ ಪೊಲೀಸರು ಸ್ಥಳದಲ್ಲಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.
- Advertisement -