Friday, May 17, 2024
spot_imgspot_img
spot_imgspot_img

ಮಂಗಳೂರು: ಸರಣಿ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ಇಬ್ಬರು ಆರೋಪಿಗಳು ಬಂಧನ

- Advertisement -G L Acharya panikkar
- Advertisement -

ಮಂಗಳೂರು: ದ್ವಿಚಕ್ರ ವಾಹನ ಮತ್ತು ಅಂಗಡಿ ಮುಂಗಟ್ಟುಗಳಲ್ಲಿ ಸರಣಿ ಕಳ್ಳತನ ಮಾಡಿದ ಪ್ರಕರಣದ ಇಬ್ಬರು ಆರೋಪಿಗಳನ್ನು ಮಂಗಳೂರಿನ ಬಂದರು ಠಾಣೆಯ ಪೊಲೀಸರು ಬಂಧಿಸಿ ಎರಡು ದ್ವಿಚಕ್ರ ವಾಹನ ಮತ್ತು ಎರಡು ಲ್ಯಾಪ್‌ಟಾಪ್ ಸೇರಿದಂತೆ ಒಟ್ಟು ಸುಮಾರು 1 ಲಕ್ಷದ 20 ಸಾವಿರ ರೂ. ಮೌಲ್ಯದ ಸೊತ್ತುಗಳನ್ನು ವಶ ಪಡಿಸಿಕೊಂಡಿದ್ದಾರೆ.

ಮಂಗಳೂರಿನ ಕಸ್ಬಾ ಬೆಂಗ್ರೆಯ ನಿವಾಸಿಗಳಾದ ಮೊಹಮ್ಮದ್‌ ಆಸಿಫ್‌ ಯಾನೆ ಆಸಿಫ್‌ ಯಾನೆ ಆಚಿ (32) ಮತ್ತು ಮಹಮ್ಮದ್‌ ಸಫ್ವಾನ್‌ (21) ಬಂಧಿತರು. ಮಹಮ್ಮದ್ ಸಿನಾನ್ ಎಂಬವರು ಡಿ.1 ರಂದು ಮಂಗಳೂರು ಉತ್ತರ ದಕ್ಕೆಯ ಬಳಿ ಪಾರ್ಕಿಂಗ್ ಮಾಡಿದ್ದ ಆಕ್ಟಿವಾ ಸ್ಕೂಟರ್ ಕಳವಾದ ಬಗ್ಗೆ ಬಂದರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಬಗ್ಗೆ ತನಿಖೆ ನಡೆಸುತ್ತಿದ್ದಾಗ ಈ ಇಬ್ಬರು ಆರೋಪಿಗಳು ಪತ್ತೆಯಾಗಿದ್ದಾರೆ. ಆರೋಪಿಗಳಿಂದ ಪಡುಬಿದ್ರೆ ನಗರ ಗ್ರಾಮ ಸೇವಾ ಕೇಂದ್ರದಿಂದ ಕಳವು ಮಾಡಿದ 2 ಲ್ಯಾಪ್ ಟಾಪ್ ಹಾಗೂ ಮಂಗಳೂರು ಉತ್ತರ ದಕ್ಕೆಯ ಪಾರ್ಕಿಂಗ್ ಸ್ಥಳದಿಂದ ಕಳವು ಮಾಡಿದ ಆಕ್ಟಿವಾ ಸ್ಕೂಟರ್ ಮತ್ತು ಮಂಕಿ ಸ್ಯ್ಟಾಂಡ್ ಬಳಿಯಿಂದ ಕಳವು ಮಾಡಿದ ಡಿಯೋ ಸ್ಕೂಟರ್ ವಶಪಡಿಸಿಕೊಳ್ಳಲಾಗಿದೆ.

ಅಲ್ಲದೆ ಕದ್ರಿ ಜಂಕ್ಷನಿನ ಸ್ಕೈನೆಟ್ ಮೊಬೈಲ್ ಶಾಪ್, ವಿನಾಯಕ ಟ್ರೇಡರ್ಸ್ ಎಂಬ ಪೈಂಟ್ ಅಂಗಡಿ ಹಾಗೂ ಕದ್ರಿ ಕಂಬಳ ಬಳಿ ನಿರ್ಮಾಣ ಹಂತದಲ್ಲಿರುವ ಕಟ್ಟಡ ಮುಂತಾದ ಕಡೆ ನಡೆದ ಸರಣಿ ಕಳ್ಳತನ, ಬಂಟ್ವಾಳದ ಕೈಕಂಬ ಪೊಳಲಿ ದ್ವಾರದ ಬಳಿಯ ಲೀಲಾ ಹೊಟೇಲ್, ಶರವು ಎಂಟರ್ ಪ್ರೈಸಸ್ ಎಂಬ ಅಂಗಡಿ, ಹಾಗೂ ಬಂಟ್ವಾಳ ಸಾರ್ವಜನಿಕ ಉದ್ಯೋಗಸ್ಥರ ಸಹಕಾರ ಸಂಘ ಮುಂತಾದ ಕಡೆ ನಡೆದ ಸರಣಿ ಕಳವು ಪ್ರಕರಣಗಳು ಬೆಳಕಿಗೆ ಬಂದಿವೆ. ಕದ್ರಿ ಪೊಲೀಸ್ ಠಾಣೆಯ ಒಟ್ಟು 3 ಪ್ರಕರಣ, ಬಂಟ್ವಾಳ ನಗರ ಪೊಲೀಸ್ ಠಾಣೆಯ 3 ಪ್ರಕರಣ ಹಾಗೂ ಪಾಂಡೇಶ್ವರ ಮತ್ತು ಬಂದರು ಠಾಣೆಯ ತಲಾ ಒಂದು ಪ್ರಕರಣ ಸೇರಿದಂತೆ ಒಟ್ಟು 8 ಪ್ರಕರಣಗಳು ಈ ಆರೋಪಿಗಳ ಮೇಲಿವೆ. ಜತೆಗೆ ಮೊಹಮ್ಮದ್ ಆಸಿಫ್ ಯಾನೆ ಆಸಿಫ್ ವಿರುದ್ಧ ಬಂದರು ಮತ್ತು ಬರ್ಕೆ ಪೊಲೀಸ್ ಠಾಣೆಗಳಲ್ಲಿನ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡ ಬಗ್ಗೆ ವಾರೆಂಟ್ ಕೂಡಾ ಹೊರಡಿಸಲಾಗಿತ್ತು ಎಂದು ಪೊಲೀಸ್‌ ಪ್ರಕಟನೆ ತಿಳಿಸಿದೆ.

- Advertisement -

Related news

error: Content is protected !!