- Advertisement -
- Advertisement -


ಮಂಗಳೂರು: ಶಾಪಿಂಗ್‌ಗೆಂದು ತೆರಳಿದ ಬಾಲಕಿಯೋರ್ವಳು ನಾಪತ್ತೆಯಾದ ಘಟನೆ ಮಂಗಳೂರಿನ ಮುಕ್ಕದಲ್ಲಿ ನಡೆದಿದೆ.
ಮುಕ್ಕ ಮಿತ್ರಪಟ್ನದ ಬಾಲಕಿ ಸ್ಪೂರ್ತಿ(17) ಎಂಬಾಕೆ ನಾಪತ್ತೆಯಾದವರು.
ಬೆಳಿಗ್ಗೆ ಶಾಪಿಂಗ್‌ಗೆಂದು ತೆರಳಿದ್ದ ಬಾಲಕಿ ವಾಪಾಸ್ಸು ಮನೆಗೆ ಬಾರದೇ ನಾಪತ್ತೆಯಾಗಿದ್ದಾಳೆ. ಮನೆಯವರು ಸಂಬಂಧಿಕರಲ್ಲಿ, ಸ್ನೇಹಿತರ ಜೊತೆ ವಿಚಾರಿಸಿ ಹಲವೆಡೆ ಹುಡುಕಿದರೂ ಪತ್ತೆಯಾಗದ ಹಿನ್ನಲೆ ಆಕೆಯ ತಾಯಿ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದಾರೆ.

ನಾಪತ್ತೆಯಾದ ಸ್ಪೂರ್ತಿ 5ಅಡಿ ಎತ್ತರವಿದ್ದು, ಎಣ್ಣೆ ಕಪ್ಪು,ಸಾಧಾರಣ ಶರೀರ ಹೊಂದಿದ್ದು, ಕನ್ನಡ, ತುಳು ಭಾಷೆ ಮಾತನಾಡುತ್ತಾರೆ. ಬಿಳಿ ಬಣ್ಣದ ಟೀಶರ್ಟ್, ಕಪ್ಪು ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿದ್ದಾರೆ. ಕುತ್ತಿಗೆಯಲ್ಲಿ ಚಿನ್ನದ ಸರ ಮತ್ತು ಸಣ್ಣ ತಾಯಿತ ಇದೆ.
ಸ್ಫೂರ್ತಿ ಪತ್ತೆಯಾದಲ್ಲಿ ಸುರತ್ಕಲ್ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕಾಗಿ ತಿಳಿಸಿದ್ದಾರೆ.
- Advertisement -