- Advertisement -
- Advertisement -
ಮಂಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ಅಕ್ರಮ ಚಿನ್ನ ಸಾಗಾಟ ಮಾಡುವ ಖದೀಮರ ವಿರುದ್ದ ಮಂಗಳೂರು ಕಸ್ಟಮ್ಸ್ ಅಧಿಕಾರಿಗಳು ಹದ್ದಿನ ಕಣ್ಣಿಟ್ಟಿದ್ದಾರೆ.
ಇಂದು ( ಮಾರ್ಚ್ 29 ) ರಂದು ದುಬೈನಿಂದ ಬಂದ ಇಬ್ಬರು ಪ್ರಯಾಣಿಕರು ಕಸ್ಟಮ್ ಅಧಿಕಾರಿಗಳನ್ನೆ ಏಮಾರಿಸುವ ರೀತಿಯಲ್ಲಿ ಚಿನ್ನ ಸಾಗಾಟಕ್ಕೆ ಯತ್ನಿಸಿ ಸಿಕ್ಕಿಬಿದ್ದಿದ್ದಾರೆ.
ಕಾಸರಗೋಡಿನ ಶುಕ್ರು ಮೊಯ್ದಿನ್ ಕುಂಞಿ ಮತ್ತು ಭಟ್ಕಳದ ಮಿಶ್ರಿ ನಸೀಮುಲ್ಲ ಗನಿ ಇಂದು ದುಬೈ ನಿಂದ ಮಂಗಳೂರಿಗೆ ಬಂದಿದ್ದರು. ಇವರನ್ನು ತಪಾಸಣೆ ಮಾಡುವ ವೇಳೆ ಇವರ ವಿಶೇಷ ಡಿಸೈನ್ ಮಾಡಲಾದ ಚಪ್ಪಲಿ ಮತ್ತು ಬಾಯಿಯಲ್ಲಿ ಚಿನ್ನ ಸಿಕ್ಕಿದೆ. ರೂ 18.75 ಲಕ್ಷ ರೂ ಮೌಲ್ಯದ 405 ಗ್ರಾಂ ಚಿನ್ನ ಇವರ ಬಳಿ ಸಿಕ್ಕಿದೆ. ಚಿನ್ನವನ್ನು ವಶಪಡಿಸಿಕೊಂಡ ಕಸ್ಟಮ್ಸ್ ಅಧಿಕಾರಿಗಳು ಆರೋಪಿಗಳಿಬ್ಬರನ್ನು ಬಂಧಿಸಿದ್ದಾರೆ
- Advertisement -