Tuesday, May 21, 2024
spot_imgspot_img
spot_imgspot_img

*ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಕ್ರಮ ವಿದೇಶಿ ಕರೆನ್ಸಿ ಪತ್ತೆ !* *ಒಳ ಉಡುಪಿನ ಒಳಗಡೆ ಇಟ್ಟು ಸಾಗಾಟ ಮಾಡುತ್ತಿದ್ದ ಕೇರಳದ ಚಿತ್ತಾರಿ ನಿವಾಸಿ ಕಸ್ಟಮ್ಸ್ ವಶಕ್ಕೆ*

- Advertisement -G L Acharya panikkar
- Advertisement -

ಮಂಗಳೂರು, ಡಿ.17: ಬಜ್ಪೆಯ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 4,35,200 ರೂ. ಮೌಲ್ಯದ ವಿದೇಶಿ ಕರೆನ್ಸಿಯನ್ನು ವಶಕ್ಕೆ ಪಡೆಯಲಾಗಿದೆ.

ಆರೋಪಿ, ಕೇರಳದ ಚಿತ್ತಾರಿ ನಿವಾಸಿಯನ್ನು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ. ಈತ ಗುರುವಾರ ಏರ್ ಇಂಡಿಯಾ ವಿಮಾನದಲ್ಲಿ ದುಬೈಗೆ ಪ್ರಯಾಣಿಸಲು ಸಂಜೆ 4:30ರ ವೇಳೆಗೆ ವಿಮಾನ ನಿಲ್ದಾಣಕ್ಕೆ ಬಂದಿದ್ದು, ತಪಾಸಣೆ ವೇಳೆ ಯೂರೊ ಹಾಗು ಯುಎಇ ದಿರ್ಹಾಮ್ ಪತ್ತೆಯಾಗಿದೆ. ಧರಿಸಿದ್ದ ಒಳ ಉಡುಪಿನ ಒಳಗಡೆ ಇಟ್ಟು ಸಾಗಾಟ ಮಾಡುತ್ತಿದ್ದ. ಸಿಐಎಸ್‌ಎಫ್ ಅಧಿಕಾರಿ ದೇವೇಂದರ್ ಸಿಂಗ್ ತಪಾಸಣೆ ನಡೆಸಿ ಅಕ್ರಮ ಸಾಗಾಟದ ವಿದೇಶಿ ಕರೆನ್ಸಿ ಪತ್ತೆ ಮಾಡಿದ್ದಾರೆ. ಆರೋಪಿ ಸಹಿತ ಸೊತ್ತನ್ನು ಮುಂದಿನ ತನಿಖೆಗೆ ಕಸ್ಟಮ್ಸ್ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ.

- Advertisement -

Related news

error: Content is protected !!