Thursday, March 28, 2024
spot_imgspot_img
spot_imgspot_img

ಮಂಗಳೂರು: ಅಡಿಕೆ ಧಾರಣೆಯಲ್ಲಿ ಏರಿಕೆ; ಹಳೆ ಅಡಿಕೆಯ ಬೆಲೆಯೆಷ್ಟು ಗೊತ್ತಾ..?

- Advertisement -G L Acharya panikkar
- Advertisement -

ಮಂಗಳೂರು: ಕೊವಿಡ್ ಲಾಕ್ ಡೌನ್ ಚಾಲ್ತಿಯಲ್ಲಿರುವಾಗಲೇ ಮಂಗಳೂರಿನ ಚಾಲಿ ಅಡಿಕೆ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆಯಲ್ಲಿ ಏರಿಕೆ ಕಂಡಿತು. ನಿನ್ನೆ ಜೂ.10ರಂದು ಮಾರುಕಟ್ಟೆಯಲ್ಲಿ ಹಳೆ ಅಡಿಕೆ ಕೆ.ಜಿ.ಗೆ 510 ರೂ.ಗಳಂತೆ ಖರೀದಿಯಾಗಿದ್ದು, ಇದೇ ವೇಳೆ ಹೊಸ ಅಡಿಕೆ ಧಾರಣೆಯೂ ಏರಿಕೆ ಕಂಡಿದೆ.

ಜೂ. 10ರಂದು ಹಳೆ ಅಡಿಕೆ ಕೆ.ಜಿ.ಗೆ 510 ರೂ. ಗೆ ಮಾರಾಟ ಆಗಿದ್ದರೆ, ಹೊಸ ಅಡಿಕೆ 410 ರೂ.ಗೆ ಖರೀದಿಯಾಗಿದೆ. ಕ್ಯಾಂಪ್ಕೊದಲ್ಲಿ ಹಳೆ ಅಡಿಕೆ ಕೆ.ಜಿ.ಗೆ 500 ರೂ. ಗೆ ಖರೀದಿ ಆಗಿದ್ದು, ಹೊಸ ಅಡಿಕೆಗೆ ಕೆ.ಜಿ.ಗೆ 400 ರೂ. ಗೆ ಖರೀದಿ ಆಗಿದೆ.

ಲಾಕ್ ಡೌನ್ ನಿಮಿತ್ತ ನಿಗದಿತ ಅವಧಿಯಲ್ಲಿ ಮಾತ್ರ ಖರೀದಿಗೆ ಅವಕಾಶ ಇದ್ದ ಕಾರಣ ಬೇಡಿಕೆ ಪೂರೈಕೆಯಲ್ಲಿ ತಕ್ಕಷ್ಟು ಪೂರೈಕೆ ಆಗದಿರುವ ಕಾರಣ ಧಾರಣೆ ನಿರಂತರ ಏರಿಕೆಯತ್ತ ಮುಖ ಮಾಡಿದ್ದು, ಕಳೆದ ವರ್ಷ ಲಾಕ್‌ಡೌನ್ ಹಲವು ಕ್ಷೇತ್ರಗಳ ಮೇಲೆ ನಕಾರಾತ್ಮಕ ಪರಿಣಾಮ ಉಂಟು ಮಾಡಿದ್ದರೂ ಅಡಿಕೆ ಬೆಳೆಗಾರರ ಪಾಲಿಗೆ ಕ್ಲಶುಭ ಸುದ್ದಿಯೇ ಸಿಕ್ಕಿತ್ತು. ಕಳೆದ ವರ್ಷ, ಇದೆ ಅವಧಿಯಲ್ಲಿ ಅಡಿಕೆ ಧಾರಣೆ ಇದೇ ತರಹ ದಾಖಲೆ ಸೃಷ್ಟಿಸಿತ್ತು. ಅಡಿಕೆ ಬೆಲೆಯಲ್ಲಿ ಚೇತರಿಕೆ ಬೆನ್ನಲ್ಲೇ ಕೃಷಿಭೂಮಿಗೆ ಬೆಲೆ ಏರಿಕೆ ಅತ್ತ ಅಡಿಕೆ ಧಾರಣೆ ಒಂದೇ ಸಮನೆ ಏರಿಕೆ ಕಾಣುತ್ತಿರುವಾಗ ರೈತಾಪಿ ವರ್ಗ ಕೃಷಿ ಭೂಮಿ ಖರೀದಿಯತ್ತ ಒಲವು ತೋರಿದೆ.

ಕೃಷಿ ಆಸಕ್ತರು ಅಡಿಕೆ ತೋಟಗಳನ್ನು ಹುಡುಕುತ್ತಿದ್ದು,ಕಳೆದ ನಾಲ್ಕು ತಿಂಗಳಿನಿಂದ ಕೃಷಿಭೂಮಿಯಲ್ಲಿ ಹತ್ತರಿಂದ ಹದಿನೈದು ಪರ್ಸೆಂಟ್ ಬೆಲೆ ಏರಿಕೆ ಕಂಡಿದೆ. ದುಡ್ಡಿರುವ ಮಂದಿ ಕೃಷಿಭೂಮಿ ಕೊಳ್ಳಲು ಮುಂದೆ ಬಂದರೂ, ಇವತ್ತು ಭೂಮಿ ಮಾಡುವವರಿಲ್ಲ. ಮಾರಲು ಹೊರಟವರು ಊರಲ್ಲಿಲ್ಲದ ಬೆಲೆ ಹೇಳುತ್ತಿದ್ದಾರೆ. ಕಾರಣ ಅಡಿಕೆ ಧಾರಣೆಯಲ್ಲಿ ಕಂಡ ಗಗನಮುಖಿ ಏರಿಕೆ.

- Advertisement -

Related news

error: Content is protected !!