Tuesday, May 21, 2024
spot_imgspot_img
spot_imgspot_img

ಮಂಗಳೂರು: ಸಾರ್ವಜನಿಕ ಸ್ಥಳದಲ್ಲಿ ಮಾದಕ ವಸ್ತು ಮಾರಾಟಕ್ಕೆ ಯತ್ನ; ಇಬ್ಬರ ಬಂಧನ..!

- Advertisement -G L Acharya panikkar
- Advertisement -

ಮಂಗಳೂರು: ಸಾರ್ವಜನಿಕ ಸ್ಥಳದಲ್ಲಿ ಮೆಥಪಟೈನ್ ಎಂಬ ನಿಷೇಧಿತ ಮಾದಕ ವಸ್ತುವನ್ನು ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ ಯುವಕರಿಬ್ಬರನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಕಾವೂರು ಗ್ರಾಮದ ಬೋಂದೆಲ್‌ ಮೈದಾನದ ಬಳಿ ನಡೆದಿದೆ.

ಬಂಧಿತ ಆರೋಪಿಗಳನ್ನು ಮಂಗಳೂರಿನ ಹಿಮನೀಶ್ (26), ಮತ್ತು ಮಂಗಳೂರು ತಾರಿ ಪಪಡ್ಪು ಕೋಟೆಕಾರ್ ನಿವಾಸಿ ಪವನ್ ರಾಜ್ ಪಿ (28) ಎಂದು ಗುರುತಿಸಲಾಗಿದೆ.

ಬಂಧಿತರಿಂದ ಸುಮಾರು 19 ಗ್ರಾಂ ತೂಕದ 57,000 ಮೌಲ್ಯದ ನಿಷೇಧಿತ ಮಾದಕ ವಸ್ತು ಹಾಗೂ ಮೊಬೈಲ್ ಫೋನ್ ಅನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳು ಮೆಥಪಟೈನ್ ಎಂಬ ನಿಷೇಧಿತ ಮಾದಕ ವಸ್ತುವನ್ನು ಬೈಕಿನಲ್ಲಿ ಪ್ಲಾಸ್ಟಿಕ್ ಕವರ್ ಗಳಲ್ಲಿ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದರು. ಆರೋಪಿಗಳನ್ನು ಉತ್ತರ ವಿಭಾಗದ ಡ್ರಗ್ಸ್ ಸ್ಪಾರ್ಡ್ ನವರು ಬಂಧಿಸಿದ್ದು, ಗಾಂಜ ಮಾರಾಟಕ್ಕೆ ಸಂಬಂಧಿಸಿದಂತೆ ಕಾವೂರು ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 8 ಸಿ, 21 ಬಿ, 27 ಬಿ ಅಡಿ, ಎನ್‌ ಡಿಪಿಎಸ್‌ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಮಂಗಳೂರು ನಗರದಲ್ಲಿ ಮಾದಕ ದ್ರವ್ಯಗಳ ದಂಧೆಯನ್ನು ಮಟ್ಟ ಹಾಕಲು ದಿಟ್ಟ ನಿರ್ಧಾರ ಕೈಗೊಂಡಿರುವ ಮಂಗಳೂರು ನಗರ ಪೊಲೀಸ್ ನ ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್ ಅವರ ಮಾರ್ಗದರ್ಶನದಂತೆ, ಸಿದ್ದಾರ್ಥ್ ಗೋಯಲ್ ಐ.ಪಿ.ಎಸ್ ಉಪ ಪೊಲೀಸ್ ಆಯುಕ್ತರು (ಕಾನೂನು ಸುವ್ಯವಸ್ಥೆ), ದಿನೇಶ್ ಕುಮಾರ್ ಉಪ ಪೊಲೀಸ್ ಆಯುಕ್ತರು (ಅಪರಾಧ ಮತ್ತು ಸಂಚಾರ) ರವರ ನಿರ್ದೇಶನದಂತೆ, ಮಂಗಳೂರು ಉತ್ತರ ಉಪ ವಿಭಾಗದ ಎಸಿಪಿ ಮನೋಜ್ ಕುಮಾರ್ ನಾಯಕ್ ರವರ ನೇತೃತ್ವದಲ್ಲಿ ಉತ್ತರ ಉಪ ವಿಭಾಗದ ಡ್ರೆಸ್ ಕೋಡ್ ಮತ್ತು ಸಿಬ್ಬಂದಿಗಳೊಂದಿಗೆ ಕಾರ್ಯಾಚರಣೆ ನಡೆಸಿರುತ್ತಾರೆ.

- Advertisement -

Related news

error: Content is protected !!