Friday, June 27, 2025
spot_imgspot_img
spot_imgspot_img

ಮಂಗಳೂರಿನ ಇತಿಹಾಸದಲ್ಲೇ ಅತೀ ದೊಡ್ಡ ಡ್ರಗ್ಸ್‌ ದಂಧೆ ಬಯಲಿಗೆಳೆದ ಮಂಗಳೂರು ಸಿಸಿಬಿ ಪೊಲೀಸರು : 6 ಕೋಟಿ ರೂ. ಮೌಲ್ಯದ ಡ್ರಗ್ಸ್ ಜೊತೆ ಕಿಂಗ್‌ಪಿನ್ ಖಾಕಿ ಬಲೆಗೆ

- Advertisement -
- Advertisement -

ಮಂಗಳೂರು: ಬರೋಬ್ಬರಿ 6 ಕೋಟಿ ರೂ. ಮೌಲ್ಯದ ಆರು ಕೆ.ಜಿಗೂ ಅಧಿಕ ಎಂಡಿಎಂಎ ಡ್ರಗ್ಸ್‌ ವಶಪಡಿಸಿಕೊಂಡಿರುವ ಮಂಗಳೂರು ಸಿಸಿಬಿ ಪೊಲೀಸರು, ನೈಜೀರಿಯಾ ಪ್ರಜೆಯನ್ನು ಬೆಂಗಳೂರಿನಲ್ಲಿ ವಶಕ್ಕೆ ಪಡೆದಿದ್ದಾರೆ.

ಈ ಸಂಬಂಧ ಮಾಹಿತಿ ನೀಡಿದ ನೀಡಿದ ಪೊಲೀಸ್ ಕಮಿಷನ‌ರ್ ಅನುಪಮ್ ಅಗರ್‌ವಾಲ್, ‘ಮಂಗಳೂರು ಕಮಿಷನರೇಟ್ ವ್ಯಾಪ್ತಿಯ ಇತಿಹಾಸದಲ್ಲೇ ದೊಡ್ಡ ಮೌಲ್ಯದ ಡ್ರಗ್ ದಂಧೆ ಬಯಲಿಗೆಳೆದ ಪ್ರಕರಣ ಇದಾಗಿದೆ’ ಎಂದು ಹೇಳಿದರು.

ವಾರದ ಹಿಂದೆ ಹೈದರ್ ಅಲಿ ಎಂಬಾತನನ್ನು ವಶಕ್ಕೆ ಪಡೆದು 15 ಗ್ರಾಂ ಎಂಡಿಎಂ ವಶಕ್ಕೆ ಪಡೆಯಲಾಗಿತ್ತು. ಈತನನ್ನ ಕೂಲಂಕೂಶ ತನಿಖೆಗೆ ಒಳಪಡಿಸಿದಾಗ ಈ ಕರಾಳ ದಂಧೆಯ ಮಾಹಿತಿ ಲಭ್ಯವಾಗಿದೆ. ಇನ್ನು ಆರೋಪಿ ನೈಜಿರಿಯಾ ಮೂಲದ ವ್ಯಕ್ತಿ ಕಳೆದ ಹಲವು ವರ್ಷದಿಂದ ಮಂಗಳೂರಿನಲ್ಲಿ ಇದ್ದಾನೆ. 35 ಡೆಬಿಟ್ ಕಾರ್ಡ್, 17 ಇನ್ ಆಕ್ಟಿವ್ ಸಿಮ್, ಬ್ಯಾಂಕ್ ಪಾಸ್ಬುಕ್ ವಶಕ್ಕೆ ಪಡೆಯಲಾಗಿದೆ. ಇನ್ನೂ ಅನೇಕ ಮಂದಿ ಭಾಗಿಯಾಗಿರುವ ಶಂಕೆ ಇದ್ದು, ಎಲ್ಲರನ್ನೂ ಬಂಧಿಸುತ್ತೇವೆ. 50, 60, 100 ಗ್ರಾಂ ಪ್ಯಾಕೇಜ್ ಮಾಡಿ ಇಡಲಾಗಿತ್ತು. ಈ ದಾಳಿ ತಡವಾಗಿದ್ರೆ ಮಂಗಳೂರಿಗೆ ಬರ್ತಾ ಇತ್ತು.

ಡ್ರಗ್ ಕಸದ ಪ್ಯಾಕೆಟ್, ಲೇಸ್, ಬಿಸ್ಕೆಟ್, ಪ್ಲಾಸ್ಟಿಕ್ ಮೂಲಕ ಗ್ರಾಹಕರಿಗೆ ವಿತರಿಸಲಾಗುತ್ತಿತ್ತು. ನೈಜಿರಿಯಾ ಪ್ರಜೆಯ ವಿಸಾ ಅವಧಿ ಎರಡು ವರ್ಷಗಳ ಹಿಂದೆ ಮುಕ್ತಾಯವಾಗಿದ್ದು, ಹೆಚ್ಚು ವಿದ್ಯಾರ್ಥಿಗಳು ಈ ತಂಡದ ಟಾರ್ಗೆಟ್ ಮತ್ತು ಗಿರಾಕಿ ಎಂಬ ಮಾಹಿತಿ ಲಭ್ಯವಾಗಿದೆ. ನೈಜಿರಿಯಾ ಪ್ರಜೆಯ ಕುಟುಂಬ ಮಂಗಳೂರಿನಲ್ಲಿ ವಾಸವಾಗಿದೆ ಎಂದು ಮಾಹಿತಿ ನೀಡಿದರು.

- Advertisement -

Related news

error: Content is protected !!