Friday, May 3, 2024
spot_imgspot_img
spot_imgspot_img

ಮಂಗಳೂರು: ಕೊರೊನಾ ಐಸೋಲೇಷನ್ ಕೇಂದ್ರ ಸ್ಥಾಪನೆಗೆ ಸ್ಥಳ ಪರಿಶೀಲನೆ; ಶಾಸಕ ಡಾ.ಭರತ್ ಶೆಟ್ಟಿ ವೈ

- Advertisement -G L Acharya panikkar
- Advertisement -

ಸುರತ್ಕಲ್: ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದಲ್ಲಿ ಕೊರೊನಾ ಸೋಂಕಿತರ ಮೇಲೆ ನಿಗಾ ಬೇರ್ಪಡಿಸುವಿಕೆ ಹಾಗೂ ಚಿಕಿತ್ಸೆ ನೀಡುವ ವ್ಯವಸ್ಥೆ ಕುರಿತಂತೆ ಕೋವಿಡ್ ಸೆಂಟರ್ ಸ್ಥಾಪಿಸಲು ಶಾಸಕ ಡಾ.ಭರತ್ ಶೆಟ್ಟಿ ವೈ ಅವರು ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆಯನ್ನು ನಡೆಸಿದರು.

ಸುರತ್ಕಲ್ ಪೊಲೀಸ್ ಠಾಣೆಯ ಹಿಂಭಾಗದಲ್ಲಿರುವ ಸಮಾಜಕಲ್ಯಾಣ ಇಲಾಖೆಗೆ ಒಳಪಟ್ಟ ಹಾಸ್ಟೆಲ್, ಎನ್ಐಟಿಕೆ ಹಾಸ್ಟೆಲ್ ಹಾಗೂ ಹೊಸಬೆಟ್ಟುವಿನಲ್ಲಿರುವ ಪ್ರಾಕೃತಿಕ ವಿಕೋಪ ನಿರ್ವಹಣಾ ಭವನವನ್ನು ಪರಿಶೀಲಿಸಲಾಯಿತು. ಎನ್ಐಟಿಕೆಯಲ್ಲಿ ಹಾಸ್ಟೆಲ್ನ ಮೂರು ಕಟ್ಟಡಗಳನ್ನು ಪರಿಶೀಲಿಸಲಾಗಿದ್ದು,ಇನ್ನೂರು ಬೆಡ್ಗಳ ಸಾಮರ್ಥ್ಯವುಳ್ಳ ಕೇಂದ್ರವನ್ನು ಸಿದ್ದಗೊಳಿಸಲಾಗಿದೆ. ಅವಶ್ಯಕತೆ ಬಿದ್ದರೆ ಮತ್ತೆ ಮುನ್ನೂರು ಬೆಡ್ಗಳ ಐಸೋಲೇಷನ್ ಕೇಂದ್ರ ಇಲ್ಲಿ ನಿರ್ಮಾಣ ಮಾಡಲು ವ್ಯವಸ್ಥೆ ಕೈಗೊಳ್ಳಲಾಗಿದೆ.ಒಟ್ಟು ಸಾವಿರಕ್ಕೂ ಮಿಕ್ಕಿ ಜನರ ನಿಗಾ ಕೇಂದ್ರಕ್ಕೆ ಇಲ್ಲಿ ಅವಕಾಶವಿದೆ.

ಹೊಸಬೆಟ್ಟುವಿನಲ್ಲಿರುವ ಪ್ರಕೃತಿ ವಿಕೋಪ ನಿರ್ವಹಣಾ ಭವನವನ್ನು ಕೂಡ ಪರಿಶೀಲಿಸಲಾಗಿದ್ದು ಸ್ಥಳೀಯರಿಗೆ ಅಗತ್ಯವಿದ್ದರೆ ಬಳಕೆಗೆ ಸಿಗಲು ಸೂಕ್ತ ವ್ಯವಸ್ಥೆ ಕೈಗೊಳ್ಳಲು ನಿರ್ಧರಿಸಲಾಯಿತು.

ಪರಿಶೀಲನೆಯ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಶಾಸಕ ಡಾ,ಭರತ್ ಶೆಟ್ಟಿ ವೈ ಅವರು ಕೊರೊನಾ ಪಾಸಿಟಿವ್ ಬಂದರೂ ಮನೆಯಲ್ಲಿ ಕೆಲವರು ಕುಳಿತುಕೊಳ್ಳದೆ ಮತ್ತಷ್ಟು ಕೊರೊನಾ ಹರಡಲು ಕಾರಣವಾಗುತ್ತಿರುವ ವರದಿಗಳು ಬರುತ್ತಿದೆ. ಇದನ್ನು ತಡೆಯಲು ಹಾಗೂ ಪಾಸಿಟಿವ್ ಆದವರ ಸಂಪರ್ಕಕ್ಕೆ ಬಂದವರನ್ನು ಪ್ರತ್ಯೇಕವಾಗಿರಿಸಲು ಐಸೋಲೇಷನ್ ಸೆಂಟರ್ ಅಗತ್ಯವಾಗಿದೆ. ಆಸ್ಪತ್ರೆಗಳಲ್ಲಿ ಕೊರೊನಾ ಸೊಂಕಿತರ ಚಿಕಿತ್ಸೆಗೆ ಐಸಿಯು ಹೊರತು ಪಡಿಸಿ ಬೆಡ್ಗಳ ಕೊರತೆಯಿಲ್ಲ. ಐಸೋಲೇಷನ್ ಕೇಂದ್ರವನ್ನು ಸೋಂಕಿನ ಸರಪಳಿ ನಿಲ್ಲಿಸಲು ಮಾತ್ರ ಬಳಸಲಾಗುತ್ತದೆ. ಇಲ್ಲಿ ಸಧಾರಣ ಚಿಕಿತ್ಸೆ, ಕೌಟುಂಬಿಕವಾಗಿ ಯಾರಿಗಾದರೂ ಪ್ರತ್ಯೇಕವಾಗಿ ಇರಲು ಬೇಕಾದ ವ್ಯವಸ್ಥೆ ಇದಾಗಿದೆ. ಊಟ,ಮೂರು ಹೊತ್ತು ನಿಗಾ ಮತ್ತಿತರ ವ್ಯವಸ್ಥೆ ಇಲ್ಲಿರಲಿದೆ. ಮಾತ್ರವಲ್ಲದೆ ಮನೆಯಿಂದಲೂ ಊಟೋಪಚಾರಗಳನ್ನು ತರಿಸಿಕೊಳ್ಳಬಹುದಾಗಿದೆ. ವೈದ್ಯಾಧಿಕಾರಿಗಳು,ನರ್ಸ್ ಗಳು ವೈದ್ಯಕೀಯ ಸೇವೆಗೆ ಲಭ್ಯವಿರುತ್ತಾರೆ.

ಸುರತ್ಕಲ್ ಮಾತ್ರವಲ್ಲದೆ ಕಾವೂರು, ಮುಚ್ಚೂರು ಹಾಗೂ ಗುರುಪುರದಲ್ಲಿ ಮೂರು ಐಸೋಲೇಷನ್ ಕೇಂದ್ರ ಸ್ಥಾಪನೆಗೆ ಸ್ಥಳ ಪರಿಶೀಲನೆ ನಡೆಸಲಾಗಿದೆ.ಪ್ರತೀ ವಾರ್ಡ್,ಗ್ರಾ ಪಂಚಾಯತ್ ವ್ಯಾಪ್ತಿಯಲ್ಲಿ ಟಾಸ್ಕ್ ಫೋರ್ಸ್ ಮಾಡಲಿದ್ದು, ಸೋಂಕಿತರ ಪತ್ತೆ ಹಚ್ಚುವಿಕೆ,ನಿಗಾ ಮತ್ತಿತರ ಕೆಲಸವನ್ನು ಮಾಡಲಿದೆ. ಜನತೆ ಭಯ ಬಿಟ್ಟು ಸೋಂಕಿನ ಪ್ರಸರಣವನ್ನು ತಡೆಯಲು ಸರಕಾರದೊಂದಿಗೆ ಕೈ ಜೋಡಿಸಬೇಕು ಎಂದರು. ಮಂಗಳೂರು ಸಹಾಯಕ ಆಯುಕ್ತ ಮದನ್ ಮೋಹನ್,ತಹಶೀಲ್ದಾರ್ ಗುರುಪ್ರಸಾದ್, ಗ್ರಾಮ ಕರಣಿಕ ಮಲ್ಯ , ನಿರ್ಮಿತಿ ಕೇಂದ್ರದ ಹಿರಿಯ ನಿರ್ದೇಶಕ ರಾಜೇಂದ್ರ ಕಲ್ಬಾವಿ, ಕಾರ್ಪೊರೇಟರ್ ವರುಣ್ ಚೌಟ,ಶ್ವೇತಾ,ಶೋಭಾ ರಾಜೇಶ್, ಯುವಮೋರ್ಚಾ ಅಧ್ಯಕ್ಷರಾದ ಭರತ್ ರಾಜ್ ಕೃಷ್ಣಾಪುರ, ಮಂಡಲ ಉಪಾಧ್ಯಕ್ಷರಾದ ವಿಠಲ ಸಾಲಿಯಾನ್ ಮತ್ತಿತರರು ಉಪ್ಥಿತರಿದ್ದರು.

- Advertisement -

Related news

error: Content is protected !!