Sunday, June 29, 2025
spot_imgspot_img
spot_imgspot_img

ಮಂಗಳೂರು: ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಕ್ರಮ ಚಿನ್ನ ಸಾಗಾಟ; ಇಬ್ಬರು ಅರೆಸ್ಟ್…!

- Advertisement -
- Advertisement -

ಮಂಗಳೂರು: ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಅಕ್ರಮ ಚಿನ್ನ ಸಾಗಾಟ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.

ಸೋಮವಾರ ದುಬೈ ವಿಮಾನದಲ್ಲಿ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದು ಇಳಿದಿದ್ದ ಇಬ್ಬರು ಪ್ರಯಾಣಿಕರನ್ನು ಅನುಮಾನದ ಹಿನ್ನಲೆಯಲ್ಲಿ ತೀವ್ರ ತಪಾಸಣೆ ಮಾಡಲಾಗಿತ್ತು. ಈ ವೇಳೆ ಓರ್ವ ವ್ಯಕ್ತಿಯ ಗುದದ್ವಾರದಲ್ಲಿ ಕ್ಯಾಪ್ಸೂಲ್‌ನಲ್ಲಿ ತುಂಬಿಸಿರುವ ಚಿನ್ನದ ಪೇಸ್ಟ್‌ಗಳು ಪತ್ತೆಯಾಗಿದ್ದು, ಮತ್ತೊರ್ವನಲ್ಲಿದ್ದ ಚಾಕೋಲೇಟ್ ಬಾಕ್ಸ್‌ನಲ್ಲಿ ಚಿನ್ನದ ತೆಳು ಹಾಳೆಗಳು ಪತ್ತೆಯಾಗಿದೆ.

ಇಬ್ಬರಿಂದ ಸುಮಾರು 50 .93 ಲಕ್ಷ ಮೌಲ್ಯದ ಅಕ್ರಮ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಕಳೆದ ವಾರವೂ ಇದೇ ರೀತಿಯಾಗಿ ಗುದದ್ವಾರದಲ್ಲಿ ಚಿನ್ನ ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಕಸ್ಟಮ್ಸ್ ಅಧಿಕಾರಿಗಳು ಪತ್ತೆ ಹಚ್ಚಿ ಸುಮಾರು 98 ಲಕ್ಷ ಮೌಲ್ಯದ ಚಿನ್ನವನ್ನು ವಶ ಪಡಿಸಿಕೊಂಡಿದ್ದರು.

- Advertisement -

Related news

error: Content is protected !!