Saturday, June 28, 2025
spot_imgspot_img
spot_imgspot_img

ಮಂಗಳೂರು: ಕಾಮುಕ ತಂದೆಯಿಂದ ನಿರಂತರ ಅತ್ಯಾಚಾರಕ್ಕೊಳಗಾದ ನತದೃಷ್ಟೆ ಮಗಳು!

- Advertisement -
- Advertisement -

ಮಂಗಳೂರು: ಸ್ವಂತ ತಂದೆಯೇ ತನ್ನ ಅಪ್ರಾಪ್ತ ಮಗಳ ಮೇಲೆ ನಿರಂತರವಾಗಿ ಅತ್ಯಾಚಾರ ಮಾಡುತ್ತಿದ್ದ ಪೈಶಾಚಿಕ ಪ್ರಕರಣ ಮಂಗಳೂರಿನಲ್ಲಿ ಹಲವು ವರ್ಷಗಳ ಬಳಿಕ ಬೆಳಕಿಗೆ ಬಂದಿದೆ. ಆರೋಪಿ ಕಾಮುಕ ತಂದೆಯನ್ನು ಪಾಂಡೇಶ್ವರ ಪೊಲೀಸರು ಬಂಧಿಸಿದ್ದಾರೆ.

ಪ್ರಸ್ತುತ ಎಸ್ ಎಸ್ ಎಲ್ ಸಿ ಓದುತ್ತಿರುವ ವಿದ್ಯಾರ್ಥಿನಿ ಸಂತ್ರಸ್ತ ಬಾಲಕಿ .ಬಾಲಕಿ ಐದನೇ ವರ್ಷದಲ್ಲಿರುವಾಗಲೇ ಅಂದರೇ 2015-2016ರಿಂದಲೇ ಕಾಮುಕ ತಂದೆ ತನ್ನ ಮಗಳ ಮೇಲೆ ಅತ್ಯಾಚಾರ ನಡೆಸುತ್ತಿದ್ದ ಎಂದು ದೂರಲಾಗಿದೆ.

driving

ಬಾಲಕಿ ದೈಹಿಕ ಹಾಗೂ ಮಾನಸಿಕ ತೊಂದರೆಯಿಂದ ಬಳಲುತ್ತಿದ್ದ ಹಿನ್ನಲೆಯಲ್ಲಿ ಪರಿಶೀಲನೆ ನಡೆಸಿದಾಗ ಆಘಾತಕಾರಿ ವಿಷಯ ಬಹಿರಂಗಗೊಂಡಿದೆ. ನಿರಂತರವಾಗಿ ಆರೋಪಿ ಅತ್ಯಾಚಾರವೆಸಗಿರುವುದರಿಂದ ನೊಂದ ಬಾಲಕಿ ಅಸ್ವಸ್ಥಗೊಂಡಿದ್ದಳು.

ಯಾರೂ ಇಲ್ಲದಾಗ ಆರೋಪಿ ತಂದೆ ಮಗಳ ಮೇಲೆಯೇ ಈ ಹೇಯ ಕೃತ್ಯ ಎಸಗುತ್ತಿದದ್ದು ವಿಚಾರಣೆ ವೇಳೆ ಬಹಿರಂಗವಾಗಿದೆ. ಈ ಬಗ್ಗೆ ಪಾಂಡೇಶ್ವರ ಮಹಿಳಾ ಪೊಲೀಸ್ ಠಾಣೆಯಲ್ಲಿ ಪೊಕ್ಸೊ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!